ಪ್ರಧಾನ ಸುದ್ದಿ

ಪ್ರಧಾನಿಗೆ ಆಹ್ವಾನ ಸಮರ್ಥಿಸಿಕೊಂಡ ಮುಲಾಯಂ ಸಿಂಗ್ ಯಾದವ್

Guruprasad Narayana

ನವದೆಹಲಿ: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ನಿಕಟ ಬಂಧುವೊಬ್ಬರ ಮದುವೆ ಪೂರ್ವ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಬಿಜೆಪಿ ಪಕ್ಷಕ್ಕಲ್ಲ ಆದರೆ ದೇಶದ ಪ್ರಧಾನಿ ಎಂದಿದ್ದಾರೆ.

ರಾಷ್ಟ್ರಪತಿ ಭಾಷಣದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು "ನನ್ನ ಊರಿನ ಗ್ರಾಮಸ್ಥರು ಸೇರಿದಂತೆ ಹಲವು ಜನ ನಾನು ಪ್ರಧಾನಿ ಅವರನ್ನು ಸೈಫಾಯಿಗೆ (ಉತ್ತರ ಪ್ರದೇಶ) ಆಹ್ವಾನಿಸಿದ್ದಕ್ಕೆ ಆಶ್ಚರ್ಯ ಪಟ್ಟಿದ್ದಾರೆ. ನಾನು ಪ್ರಧಾನಿ ಅವರನ್ನು ನನ್ನ ಗ್ರಾಮಕ್ಕೆ ಆಹ್ವಾನಿಸಿದ್ದು ಎಕೆಂದರ ಅವರು ದೇಶದ ಪ್ರಧಾನಿ, ಬಿಜೆಪಿ ಪಕ್ಷಕ್ಕಲ್ಲ" ಎಂದು ಯಾದವ್ ನುಡಿದಿದ್ದಾರೆ.

ಮೋದಿ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ, ಎನ್ ಡಿ ಎ ಸರ್ಕಾರ ಕೆಲವು ಕಾಯ್ದೆಗಳನ್ನು ಸಂಸತ್ ಮೇಲ್ಮನೆಯಲ್ಲಿ ಜಾರಿ ಮಾಡಲು ಸಮಾಜವಾದಿ ಪಕ್ಷದ ಬೆಂಬಲಕ್ಕೆ ಮೊರೆ ಹೋಗಿದೆ ಎಂದು ಊಹಿಸಲಾಗಿತ್ತು.

ಈ ಊಹೆಗೆ ಸಮಾಜವಾದಿ ಪಕ್ಷ ಕೂಡ ಪುಷ್ಟಿ ನೀಡಿದೆ. ಯಾದವ್ ಅವರು ತಮ್ಮ ಭಾಷಣದ ಕೊನೆಯಲ್ಲಿ, ಭಾರತವನ್ನು ಶಕ್ತಿಯುತ ರಾಷ್ಟ್ರ ಮಾಡಲು ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.

ಆದರೆ ಇದಕ್ಕೂ ಮುಂಚೆ ಮಾಡಿದ್ದ ಭಾಷಣದಲ್ಲಿ ಮುಲಾಯಂ ಅವರು ಮೋದಿ ಮತ್ತು ಎನ್ ಡಿ ಎ ಸರ್ಕಾರದ ಮೇಲೆ ದಾಳಿ ಮಾಡಿದ್ದರು. "ನಿಮ್ಮ ಘೋಷಣೆ ಸಬಕಾ ಸಾಥ್, ಸಬಕಾ ವಿಕಾಸ್ (ಎಲ್ಲರಿಗೂ ಅಭಿವೃದ್ಧಿ) ಶುದ್ಧ ಸುಳ್ಳು. ನಿಮ್ಮ ಅಭಿವೃದ್ಧಿಯ ನಡೆ ಕೆಲವು ಜನಕ್ಕಷ್ಟೆ ಸೀಮಿತವಾಗಿದೆಯೆ ದಯವಿಟ್ಟು ತಿಳಿಸಿ... ಕೆಲವು ಕಾಯ್ದೆಯ ಮೂಲಕ ನೀವು ಉದ್ದಿಮೆದಾರರನ್ನಷ್ಟೆ ಬೆಂಬಲಿಸುತ್ತಿರುವುದಲ್ಲವೇ?" ಎಂದು ಪ್ರಶ್ನಿಸಿದ್ದರು.

SCROLL FOR NEXT