ಪ್ರಧಾನ ಸುದ್ದಿ

ಯುಪಿಎಸ್‌ಸಿ ಫಲಿತಾಂಶ ಪ್ರಕಟ, ರಾಜ್ಯದ 60 ಅಭ್ಯರ್ಥಿಗಳು ಆಯ್ಕೆ

Lingaraj Badiger

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2014ನೇ ಸಾಲಿನ ಸಿವಿಲ್ ಸರ್ವೀಸ್‌ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರಾಜ್ಯದ 60ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸಿವಿಲ್ ಸರ್ವೀಸ್‌ಗೆ ಒಟ್ಟು 1,364 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮೊದಲ ನಾಲ್ಕು ರ್ಯಾಂಕ್‌ಗಳನ್ನು ಮಹಿಳೆಯರೇ ಪಡೆದುಕೊಂಡಿದ್ದಾರೆ.

ಐಎಎಸ್‌ನಲ್ಲಿ
ಹೀರಾ ಸಿಂಘಾಲ್ ಪ್ರಥಮ ರ್ಯಾಂಕ್, ರೇಣು ರಾಜ್ ಎರಡನೇ ರ್ಯಾಂಕ್, ನಿಧಿ ಗುಪ್ತಾ ಮೂರನೇ ರ್ಯಾಂಕ್ ಹಾಗೂ ವಂದನಾ ರಾವ್ ಅವರು ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.

ಇನ್ನು ಸುಹರ್ಶ ಭಗತ್ 5ನೇ ರ್ಯಾಂಕ್, ಚಾರುಶಿ, ಲೋಕಬಂಧು 7ನೇ, ನಿತೀಶ್ 8ನೇ, ಆಶೀಶ್ ಕುಮಾರ್ 9ನೇ ಹಾಗೂ ಅರವಿಂದ್ ಸಿಂಗ್ 10ನೇ ರ್ಯಾಂಕ್ ಪಡೆದಿದ್ದಾರೆ.

ಯುಪಿಎಸ್‌ಸಿ ಈ ಬಾರಿ ಅಭ್ಯರ್ಥಿ ಗಳಿಗೆ ಸಂದರ್ಶನ ಮುಗಿಸಿದ ನಾಲ್ಕೇ ದಿನಗಳಲ್ಲಿ ಫ‌ಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಏಪ್ರಿಲ್‌ 27 ರಿಂದ ಜೂನ್‌ 30 ರ ವರೆಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗಿತ್ತು.

ಐಎಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕನ್ನಡಿಗರು
ನಿತೀಶ್ 8ನೇ ರ್ಯಾಂಕ್
ಫೌಜಿಯಾ ತರನಮ್ 31
ಕುಣಿಗಲ್ ನ ಡಿ.ಕೆ.ಬಾಲಾಜಿ 36
ಜಿ.ಸಿ.ವಿನಯ್ ಗೌಡ 175

SCROLL FOR NEXT