ಬೆಂಗಳೂರು: ಲೋಕಾಯುಕ್ತದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವ ಶ್ರೀನಿವಾಸಗೌಡ, ಅಶ್ವಿನ್ ರಾವ್ ಮತ್ತು ರಿಯಾಜ್ ಅವರನ್ನು ವಿಶೇಷ ತನಿಖಾ ತಂಡ ತೀರ್ವ ವಿಚಾರಣೆಗೊಳಪಡಿಸಿದ್ದಾರೆ.
ಅಶ್ವಿನ್ ರಾವ್ ಅವರನ್ನು ಲೋಕಾಯುಕ್ತ ಕಚೇರಿ ಹಾಗೂ ಕೆಲ ಪಂಚತಾರಾ ಹೋಟೆಲ್ ಗಳಲ್ಲಿ ಪರಾಮಾರ್ಶೆ ನಡೆಸಿದ್ದಾರೆ. ಅಲ್ಲದೇ, ಲೋಕಾಯುಕ್ತ ಕಚೇರಿಯಲ್ಲಿನ ಕಾನ್ಫರೆನ್ಸ್ ಸಭಾಂಗಣದ ಬೀಗದ ಕೈಯೊಂದು ರಿಯಾಜ್ ಅವರ ಬಳಿ ಇರುವುದನ್ನು ಪತ್ತೆ ಹಚ್ಚಿರುವ ತಂಡ ಸಭಾಂಗಣಕ್ಕೆ ಹಾಗೂ ಕಚೇರಿಗೆ ರಿಯಾಜ್ ಅವರನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬಿಡಿಎ ಬ್ರೋಕರ್ ವಾಸು, ವಿ.ಭಾಸ್ಕರ್ ಅಲಿಯಾಸ್ 420 ಭಾಸ್ಕರ್ ಗಾಗಿ ಎಸ್ಐಟಿ ತಂಡ ತೀವ್ರ ಶೋಧ ನಡೆಸಿದೆ.