22 ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ ಕೊನೆಗೂ 1993 ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ತನ್ನ 54 ನೇ ಹುಟ್ಟುಹಬ್ಬದಂದೇ ಯೂಕೂಬ್ ಗಲ್ಲಿಗೇರಿದ್ದಾನೆ.
ಯಾಕೂಬ್ ಮೆಮನ್‌ನ ಕುಣಿಕೆಯ ಹಾದಿ...
1993 ಮಾರ್ಚ್ 12: ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. 13 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು 277 ಮಂದಿ ಸಾವಿಗೀಡಾಗಿದ್ದರು. 713 ಮಂದಿಗೆ ಗಾಯಗಳಾಗಿತ್ತು.
ನವೆಂಬರ್ 4 : ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ 189 ಜನರ ವಿರುದ್ಧ 10,000 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಯಿತು. ನವೆಂಬರ್ 19 ರಂದು ಕೇಸು ಸಿಬಿಐ ವಗೆ ಹಸ್ತಾಂತರಿಸಲಾಯಿತು
1995 ಏಪ್ರಿಲ್ 10: 26 ಆರೋಪಿಗಳನ್ನು ಟಾಡಾ ಕೋರ್ಟ್ ಆರೋಪ ಮುಕ್ತಗೊಳಿಸಿತು,
ಏಪ್ರಿಲ್ 19: ವಿಚಾರಣೆ ಆರಂಭ
ಅಕ್ಟೋಬರ್ 14 : ಸಂಜಯ್ ದತ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು
ಮಾರ್ಚ್ 29 : ಪಿ.ಡಿ ಕೋಡೆ ಟಾಡಾ ಕೋರ್ಟ್‌ನ ವಿಶೇಷ ನ್ಯಾಯಾಧೀಶರಾಗಿ ನೇಮಕಗೊಂಡರು
2000 ಅಕ್ಟೋಬರ್ : 684 ರಂದು ಸಾಕ್ಷಿಗಳ ವಿಚಾರಣೆ ಮುಕ್ತಾಯವಾಯಿತು
2003 ಸಪ್ಟೆಂಬರ್ : ಪ್ರಕರಣದ ವಿಚಾರಣೆ ಮುಗಿಯಿತು. ಶಿಕ್ಷೆ ಪ್ರಕಟಣೆ ಮುಂದೂಡಲಾಯಿತು
2006 ಜೂನ್ 13 : ಮಾಫಿಯಾ ದೊರೆ ಅಬು ಸಲೇಂ ಬಗ್ಗೆ ತನಿಖೆ ಆರಂಭ
ಸಪ್ಟೆಂಬರ್ 12 : ಯಾಕೂಬ್ ಮೆಮನ್ ಸೇರಿಂದತೆ 12 ಜನರಿಗೆ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು. 20 ಜನರಿಗೆ ಜೀವಾವಧಿ ಶಿಕ್ಷೆ. ಮೆಮನ್ ಕುಟುಂಬದ ನಾಲ್ವರು ದೋಷಿಗಳೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು. ಮೂವರನ್ನು ಆರೋಪ ಮುಕ್ತಗೊಳಿಸಿತು.
2013 ಮಾರ್ಚ್ 21: ಯಾಕೂಬ್ ಮೆಮನ್‌ನ ಗಲ್ಲುಶಿಕ್ಷೆಗೆ ಸುಪ್ರೀಂ ಅಸ್ತು. 10 ಜನರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ತೀರ್ಪು ಪ್ರಕಟಿಸಲಾಯಿತು.
ಜುಲೈ 30: ಮೆಮನ್‌ನ ಪುನರ್‌ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.
2014 ಏಪ್ರಿಲ್ 11: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಳ್ಳಿದರು.
ಜೂನ್ 2: ಮೆಮನ್ ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಗೆ ತಡೆಯೊಡ್ಡಿತು.
2015 ಏಪ್ರಿಲ್ 9 : ಮೆಮನ್ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತು
ಜುಲೈ 21: ಗಲ್ಲುಶಿಕ್ಷೆ ರದ್ದತಿಗೆ ಸಲ್ಲಿಸಿದ ಅರ್ಜಿ ವಜಾ
ಜುಲೈ 23 : ಜುಲೈ 30ನೇ ತಾರೀಖಿಗೆ ಗಲ್ಲಿಗೇರಿಸಬಾರದು ಎಂಬ ಅರ್ಜಿಯನ್ನು ಮೆಮನ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದರು .
ಜುಲೈ 28 :ಗಲ್ಲು ಶಿಕ್ಷೆ ಬಗ್ಗೆ ನ್ಯಾಯಪೀಠದಲ್ಲಿ ಭಿನ್ನಾಭಿಪ್ರಾಯವೆದ್ದಿತು
ಜುಲೈ 29: ಮುಖ್ಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠ ಮೆಮನ್ ಅರ್ಜಿಯನ್ನು ತಳ್ಳಿ ಹಾಕಿತು. ಮಹಾರಾಷ್ಟ್ರ ಗವರ್ನರ್ ಮತ್ತು ರಾಷ್ಟ್ರಪತಿ ಮೆಮನ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು.
ಜುಲೈ 30: ಮುಂಜಾನೆ 3 ಗಂಟೆಗೆ ಮೆಮನ್ ಅರ್ಜಿಯನ್ನು ತಿರಸ್ಕರಿಸಿ ಗಲ್ಲು ಶಿಕ್ಷೆಗೆ ಆಜ್ಞೆ ನೀಡಲಾಯಿತು.
ಜುಲೈ 30: ಮುಂಜಾನೆ 6.30ಕ್ಕೆ ಮೆಮನ್‌ಗೆ ಗಲ್ಲಿಗೇರಿಸಲಾಯಿತು.