ಪ್ರಧಾನ ಸುದ್ದಿ

ಡೆಬಿಟ್ ಕಾರ್ಡ್ ಗಳನ್ನು ನೀಡಲಿರುವ ಭಾರತೀಯ ಅಂಚೆ

Guruprasad Narayana

ನವದೆಹಲಿ: ಭಾರತೀಯ ಅಂಚೆಯಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ೧೫ ದಶಲಕ್ಷ ವೈಯಕ್ತಿಕ ಡೆಬಿಟ್ ಕಾರ್ಡ್ ನೀಡಲು ನಗದು ನಿರ್ವಹಣಾ ಹಾಗು ಪಾವತಿ ಸೇವೆಗಳ ಸಂಸ್ಥೆ (ಸಿ ಎಂ ಎಸ್ ಇನ್ಫೋಸಿಸ್ಟಮ್ಸ್) ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬುಧವಾರ ತಿಳಿಸಿದೆ.

"೩೦ ಕೋಟಿಯ ಈ ಒಪ್ಪಂದದ ಯೋಜನೆ ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸದ್ಯಕ್ಕೆ ಭಾರತೀಯ ಅಂಚೆ ಇಲಾಖೆ ಸುಮಾರು ೧೦೦ ದಶಲಕ್ಷ ಉಳಿತಾಯ ಖಾತೆದಾರರಿಗೆ ಸೇವೆ ನೀಡುತ್ತಿದ್ದು ದೇಶದಾದ್ಯಂತ ಗ್ರಾಹಕರ ಸುಲಭ ವಹಿವಾಟಿಗೆ ಎಟಿಎಂ ಗಳನ್ನು ತೆರೆಯುವ ಹಂತ ಹಂತವಾದ ಯೋಜನೆಯನ್ನು ಸದ್ಯಕ್ಕೆ ಜಾರಿಗೊಳಿಸಿದೆ.

ಈ ಎಟಿಎಂ ಗಳಲ್ಲಿ ಗ್ರಾಹಕರು ಬಳಸಬಹುದಾದ ರೂಪೆ ಚಾಲಿತ ಡೆಬಿಟ್ ಕಾರ್ಡ್ ಗಳನ್ನು ನೀಡಲು ಅಂಚೆ ಇಲಾಖೆ ಸಿ ಎಂ ಎಸ್ ಇನ್ಫೋಸಿಸ್ಟಮ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

SCROLL FOR NEXT