ಪ್ರಧಾನ ಸುದ್ದಿ

ರೈಲ್ವೇ ಸೇವೆ ಖಾಸಗಿ ವಲಯಕ್ಕೆ ಸೇರಿಸುವಂತೆ ಶಿಫಾರಸು?

Rashmi Kasaragodu

ನವದೆಹಲಿ: ಸರಕು ಸಾಗಾಣಿಕೆ ರೈಲಿನ ನಂತರ ಪ್ಯಾಸೆಂಜರ್ (ಪ್ರಯಾಣಿಕ) ರೈಲು ಸೇವೆಗಳನ್ನು ಖಾಸಗಿ ವಲಯಕ್ಕೆ ಸೇರಿಸಬೇಕೆಂದು ಬಿಬೇಕ್ ದೆಬ್ರೋಯ್ ನೇತೃತ್ವದ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಭಾರತೀಯ ರೇಲ್ವೆಯಲ್ಲಿ ಸಮಯಾನುಸಾರವಾಗಿ ಬದಲಾವಣೆಗಳನ್ನು ತರುವ ಬಗ್ಗೆ ನಿರ್ದೇಶನ ನೀಡುವ ಸಮಿತಿಯೇ ಖಾಸಗಿ ವಲಯಕ್ಕೆ ಸೇರಿಸುವ ಬಗ್ಗೆ ಶಿಫಾರಸು ಮಾಡಿದೆ.

ಪ್ರಯಾಣಿಕ ರೈಲು ಸಂಚಾರವನ್ನು ಖಾಸಗಿ ಕಂಪನಿಗಳು ನಡೆಸುವುದಾದರೆ ಅದಕ್ಕೆ ಒಪ್ಪಿಗೆ ನೀಡಬೇಕು ಎಂಬುದಾಗಿದೆ ದೆಬ್ರೋಯ್ ಸಮಿತಿಯ ಶಿಫಾರಸು. ಈ ಶಿಫಾರಸು ಒಪ್ಪಿಕೊಂಡರೆ ಟಾಟಾ ಅಥವಾ ಬಿರ್ಲಾ ಸೇರಿದಂತೆ ಪ್ರಧಾನ ಖಾಸಗಿ ಕಂಪನಿಗಳು ರೈಲು ಸಂಚಾರ ಆರಂಭಿಸಬಹುದಾಗಿದೆ. ಆದರೆ ರೈಲ್ವೆಯನ್ನೇ ಖಾಸಗೀಕರಣಗೊಳಿಸಬೇಕೆಂದು ಸಮಿತಿ ಹೇಳಲಿಲ್ಲ.  

ಒಂದು ವೇಳೆ ಈ ಶಿಫಾರಸನ್ನು ಸರ್ಕಾರ ಒಪ್ಪಕೊಂಡರೆ ರೈಲ್ವೇ ವಲಯದಲ್ಲಿ ಭಾರೀ ಬದಲಾವಣೆಗಳು ಉಂಟಾಗಲಿವೆ.

ಅದೇ ವೇಳೆ ರೇಲ್ವೇ ಸೇವೆಗಳ ಜತೆ ರೈಲ್ವೇಗಾಗಿ ಕಾರ್ಯವೆಸಗುವ ಶಾಲೆ, ಆಸ್ಪತ್ರೆ, ಕೆಟರಿಂಗ್  ಸೇವೆಗಳಲ್ಲಿ ಬದಲಾವಣೆ ಇಲ್ಲವೇ ಅವುಗಳು ನಿರ್ಬಂಧಕ್ಕೊಳಗಾಗುವ ಸಾಧ್ಯತೆಗಳೂ ಇರುತ್ತವೆ. ಮಾತ್ರವಲ್ಲದೆ ರೈಲ್ವೇಯನ್ನು ವಿವಿಧ ಬ್ಯುಸಿನೆಸ್ ಯುನಿಟ್‌ಗಳಾಗಿ ವಿಭಜಿಸುವ ಬಗ್ಗೆಯೂ ಶಿಫಾರಸು ಇದೆ.

ಪ್ರಸ್ತುತ ಸಮಿತಿ, ಈ ಎಲ್ಲ ಶಿಫಾರಸುಗಳನ್ನು ಇಂದು ಸರ್ಕಾರದ ಮುಂದಿಡಲಿದೆ.

SCROLL FOR NEXT