ನಟ ಸಲ್ಮಾನ್ ಖಾನ್ 
ಪ್ರಧಾನ ಸುದ್ದಿ

ಸಲ್ಮಾನ್ ಗೆ ಮತ್ತೆ ಸಂಕಟ: ಅಂಗರಕ್ಷಕ-ಪ್ರತ್ಯಕ್ಷದರ್ಶಿಯ ಸಾವಿನ ತನಿಖೆಗೆ ಅರ್ಜಿ

ಪುಣೆ ಮೂಲದ ಮಾನವಹಕ್ಕುಗಳ ಕಾರ್ಯಕರ್ತ, ನಟ ಸಲ್ಮಾನ್ ಖಾನ್ ಅವರ ಅಂಗರಕ್ಷಕ ರವೀಂದ್ರ ಪಾಟೀಲ್ ಅವರ ಸಾವಿನ ಸುತ್ತಲಿರುವ ಸಂದರ್ಭಗಳನ್ನು ತನಿಖೆ

ಮುಂಬೈ: ಪುಣೆ ಮೂಲದ ಮಾನವಹಕ್ಕುಗಳ ಕಾರ್ಯಕರ್ತ, ನಟ ಸಲ್ಮಾನ್ ಖಾನ್  ಅವರ ಅಂಗರಕ್ಷಕ ರವೀಂದ್ರ ಪಾಟೀಲ್ ಅವರ ಸಾವಿನ ಸುತ್ತಲಿರುವ ಸಂದರ್ಭಗಳನ್ನು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಸಲ್ಮಾನ್ ಖಾನ್ ಆರೋಪಿಯಾಗಿರುವ ೨೦೦೨ 'ಹಿಟ್ ಅಂಡ್ ರನ್' ಪ್ರಕರಣದಲ್ಲಿ ರವೀಂದ್ರ ಪಾಟೀಲ್ ಪ್ರತ್ಯಕ್ಷದರ್ಶಿ ಕೂಡ.

ರಾಜ್ಯ ಸರ್ಕಾರದ ತನಿಖೆಗೆ ಕೋರಿ ಬಾಂಬೆ ಹೈಕೋರ್ಟ್ ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಪ್ರತ್ಯಕ್ಷದರ್ಶಿಗೆ ವಿಚಾರಣೆ ವೇಳೆಯಲ್ಲಿ ಅಪಘಾತದ ಸತ್ಯಾಂಶಗಳನ್ನು ಮುಚ್ಚಿಡಲು ಒತ್ತಡ ಹೇರಿದ ಸಲ್ಮಾನ್ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅರ್ಜಿದಾರ-ಕಾರ್ಯಕರ್ತ ಹೇಮಂತ್ ಪಾಟೀಲ್ ಮನವಿ ಮಾಡಿದ್ದಾರೆ.

ಮುಂದಿನ ವಾರ ನ್ಯಾಯಾಲಯದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಹೇಮಂತ್ ಪಾಟೀಲ್ ಅವರ ವಕೀಲ ಆರ್ ಎನ್ ಕಚಾವೆ ತಿಳಿಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ಸಲ್ಮಾನ್ ಖಾನ್ ಮತ್ತು ಇತರರು ಅಂಗರಕ್ಷನ ಮೇಲೆ ಒತ್ತಡ ಹೇರಿದ್ದಾರೆ ಎಂದು ಅರ್ಜಿದಾರ ಆರೋಪಿಸಿದ್ದಾರೆ. ರವೀಂದ್ರ ಪಾಟಿಲ್ ಅಪಘಾತದ ನಿಜಾಂಶಗಳನ್ನು ಹೇಳದಂತೆ ತಡೆಯಲು ಪ್ರಯತ್ನಿಸಲಾಗಿತ್ತು ಎಂದು ಕೂಡ ಆರೋಪಿಸಲಾಗಿದೆ.

ಮಾಧ್ಯಮದ ವರದಿಗಳನ್ನು ಆಧರಿಸಿ, ಆ ಅಂಗರಕ್ಷಕ ಕೆಲವು ದಿನಗಳು ಕಣ್ಮರೆಯಾಗಿ ನಂತರ ನಿಘೂಡವಾಗಿ ಮತ್ತೆ ಪತ್ತೆಯಾಗಿದ್ದ ಆದುದರಿಂದ ಇದನ್ನು ತನಿಖೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನ್ಯಾಯಾಲಯದ ಮುಂದೆ ಹಾಜರಾಗದಿದ್ದಕ್ಕೆ ರವೀಂದ್ರ ಪಾಟಿಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಅವರು ಸಲ್ಮಾನ್ ಮತ್ತು ಸಹಚರರಿಗೆ ಹೆದರಿದ್ದರು. ಅವರಿಗೆ ರಕ್ಷಣೆ ನೀಡುವ ಬದಲು ಅವರನ್ನು ಬೆದರಿಸಿ ಜೈಲಿಗೆ ದೂಕಲಾಯಿತು ಎಂದು ಕೂಡ ಆರೋಪಿಸಲಾಗಿದೆ.

ಅಂಗರಕ್ಷಕ ಬಿಡುಗಡೆಯ ನಂತರ ಅವನು ತಲೆಮರೆಸಿಕೊಂಡಿದ್ದ. ನಂತರ ಪೊಲೀಸರು ಮಹಬಲೇಶ್ವರದ ಬೆಟ್ಟದ ತಪ್ಪಲಿನ ಒಂದು ಹೋಟೆಲ್ನಲ್ಲಿ ಅವನನ್ನು ಪತ್ತೆಹಚ್ಚಿದ್ದರು. ಅವನು ಟ್ಯೂಬರ್ ಕ್ಯುಲೋಸಿಸ್ ನಿಂದ ನರಳುತ್ತಿದ್ದಾನೆ ಎಂದು ತಿಳಿಸಲಾಗಿತ್ತು ಮತ್ತು ೨೦೦೭ ಅಕ್ಟೋಬರ್ ೪ ರಂದು ಕೊನೆಯುಸಿರೆಳೆದಿದ್ದ ಎಂದು ಅರ್ಜಿದಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT