ಟ್ಯುನೀಷಿಯಾ: ಟ್ಯುನೀಷಿಯಾದ ಇಂಪೀರಿಯಲ್ ಮರ್‍ಹಬಾ ಹೋಟೆಲ್‍ನಲ್ಲಿ ವಿದೇಶಿಯರು ಸೇರಿ ದಂತೆ ಹಲವಾರು ಪ್ರವಾಸಿಗರು ತಂಗಿದ್ದರು. ಬೀಚ್ ರೆಸಾರ್ಟ್‍ಗೆ ಪ್ರವಾಸಿಗರಂತೆ ಶಾರ್ಟ್ಸ್ ಧರಿಸಿ ಬಂದ ಯುವಕನೊಬ್ಬ ತನ್ನ ಬಂದೂಕಿನ ಮೂಲಕ ಮನಬಂದಂತೆ ಗುಂಡು ಹಾರಿಸಿದ್ದು, 27 ಮಂದಿಯನ್ನು ಕೊಂದುಹಾಕಿದ್ದಾನೆ.
ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ರೆಸಾರ್ಟ್ ಘಟನೆ ನಂತರ ಅಕ್ಷರಶಃ ಸ್ಮಶಾನದಂತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಬಂದೂಕುಧಾರಿಯ ಮೃತದೇಹವೂ ಅದೇ ಪ್ರದೇಶದಲ್ಲಿ ಪತ್ತೆಯಾಗಿದೆ. ಜತೆಗೆ ಕಲಾಶ್ನಿಕೋವ್ ರೈಫಲ್ ಕೂಡ ಸಿಕ್ಕಿದೆ. 2011ರ ಅರಬ್ ಕ್ರಾಂತಿಯ ಬಳಿಕ ಪ್ರಜಾಸತ್ತಾತ್ಮಕ ಪರಿವರ್ತನೆಯ ಮಾದರಿ ಎಂದೇ ಖ್ಯಾತಿ ಗಳಿಸಿರುವ ಟ್ಯುನೀಷಿಯಾವು ಅರಬ್ ಜಗತ್ತಲ್ಲೇ ಅತಿ ಹೆಚ್ಚು ಜಾತ್ಯತೀತ ರಾಷ್ಟ್ರ.
ಈಗ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ, ಈ ಹಿನಂದೆ ಉತ್ತರ ಆಫ್ರಿಕಾದ ಪ್ರವಾಸಿತಾಣಗಳ ಮೇಲೆ ಇಸ್ಲಾಮಿಸ್ಟ್ ಜಿಹಾದಿಗಳು ದಾಳಿ ನಡೆಸಿದ್ದರು. ಈ ಪ್ರದೇಶಗಳು ಪಾಶ್ಚಿಮಾತ್ಯ ಜೀವನಶೈಲಿ ಹಾಗೂ ಮದ್ಯ ಸೇವನೆಗೆ ಮುಕ್ತವಾಗಿರುವುದೇ ಜಿಹಾದಿಗಳ ಕೋಪಕ್ಕೆ ಕಾರಣ.