ಬೆಂಗಳೂರು: ನನ್ನ ಪುತ್ರನ ವಿರುದ್ಧ ತನಿಖೆ ನಡೆಸಬೇಡಿ ಎಂದು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಗೆ ಲೋಕಾಯುಕ್ತ ನ್ಯಾಯಾಮೂರ್ತಿ ವೈ ಭಾಸ್ಕರ್ ರಾವ್ ಸೂಚಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ತನಿಖೆ ನಡೆಸುವಂತೆ ಉಪಲೋಕಾಯುಕ್ತ ಸುಭಾಷ್ ಬಿ ಆಡಿ ಆದೇಶಿಸಿದ್ದರು. ಈ ಸಂಬಂಧ ಬೆಳಗ್ಗಿನಿಂದ ಸೋನಿಯಾ ನಾರಂಗ್ ಅವರು ತನಿಖೆ ಕೈಗೊಂಡಿದ್ದರು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಇತ್ತ ಲೋಕಾಯುಕ್ತ ಭಾಸ್ಕರ್ ರಾವ್ ಅವರು ತನಿಖೆ ನಡೆಸಬೇಡಿ ಎಂದು ಸೋನಿಯಾ ನಾರಂಗ್ ನಿರ್ದೇಶಿಸಿದ್ದಾರೆ.
ಸೋನಿಯಾ ನಾರಂಗ್ ಗೆ 23ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಹಾಲಿ ಹಾಗೂ ನಿವೃತ್ತ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಆದರೆ ಭಾಸ್ಕರ್ ರಾವ್ ಅರು ನನ್ನ ಪುತ್ರ ಮತ್ತು ಇನ್ನುಳಿದವರ ಬಗ್ಗೆ ತನಿಖೆ ಬೇಡ ನಡೆಸಬೇಡಿ. ತನಿಖೆ ಮಾಡುವುದನ್ನು ತಕ್ಷಣ ನಿಲ್ಲಿಸಿಬಿಡಿ ಎಂದು ತಾಕೀತು ಮಾಡಿದ್ದಾರೆ.
ಲೋಕಾಯುಕ್ತರ ಮಗ ಅಶ್ವಿನ್ ರಾವ್, ಮತ್ತೊಬ್ಬ ಆರೋಪಿ ಕೃಷ್ಮರಾವ್ ಅಲಿಯಾಸ್ ನರಸಿಂಹ ರಾವ್, ಆರ್ ಟಿಐ ಕಾರ್ಯಕರ್ತ ಭಾಸ್ಕರ್ ಸೇರಿದಂತೆ ಇತರರ ವಿರುದ್ಧ ತನಿಖೆ ನಡೆಸದಂತೆ ಸೂಚಿಸಲಾಗಿದೆ.