ಪ್ರಧಾನ ಸುದ್ದಿ

ಕೃಷ್ಣರಾವ್‌ನನ್ನು ಪತ್ತೆ ಹಚ್ಚಿದ ಲೋಕಾಯುಕ್ತ ಪೊಲೀಸರು

Lingaraj Badiger

ಬೆಂಗಳೂರು: ಕೃಷ್ಣರಾವ್ ಎಂಬ ಹೆಸರಿನಲ್ಲಿ ಎಂಜಿನಿಯರ್, ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಂಚಿನಲ್ಲಿರುವ ಅಧಿಕಾರಿಗಳನ್ನು ಕರೆದು ಹಣ ನೀಡದಿದ್ದಲ್ಲಿ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದ  ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಸೋನಿಯಾ ನಾರಂಗ್‍ಗೆ ಆದೇಶಿಸಿದ್ದು, ತನಿಖೆಯ ವೇಳೆ ಆರೋಪಿ ಕೃಷ್ಣ ರಾವ್ ಲೋಕಾಯುಕ್ತ ಜಂಟಿ ಆಯುಕ್ತ(ಪಿಆರ್ಒ) ಸೈಯದ್ ರಿಯಾಝ್ ಅವರೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎರಡು ಐಶಾರಾಮಿ ಹೋಟೆಲ್ ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದ್ದು, ನಾನು ನ್ಯಾ.ಭಾಸ್ಕರ್ ರಾವ್ ಅವರ ಕಾರ್ಯದರ್ಶಿ ಎಂದು ಹೇಳಿಕೊಂಡು ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕೃಷ್ಣ ರಾವ್ ಯಾರು ಎಂಬುದನ್ನು ಸ್ಪಷ್ಟವಾಗಿ ಗುರಿತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

40 ವರ್ಷದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಎಂಬ ವ್ಯಕ್ತಿಯನ್ನಷ್ಟೆ ಅಲ್ಲದೆ, ಆತನ ಏಜೆಂಟ್ ಗಳನ್ನು ಸಹ ಪತ್ತೆ ಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT