ಪ್ರಧಾನ ಸುದ್ದಿ

ಸಲಿಂಗ ಪ್ರೇಮ ಆನುವಂಶಿಕ ವಿಕಲಾಂಗತೆ: ಸುಬ್ರಮಣ್ಯ ಸ್ವಾಮಿ

Guruprasad Narayana

ನವದೆಹಲಿ: ಅತ್ತ ವಿಶ್ವದ ವಿವಿಧ ರಾಷ್ಟ್ರಗಳು ಸಲಿಂಗ ಪ್ರೇಮ ಮತ್ತು ಸಲಿಂಗ ಮದುವೆಗಳ ಮಾನ್ಯತೆಯನ್ನು ಎತ್ತಿ ಹಿಡಿಯುತ್ತಿದ್ದರೆ, ಇತ್ತ ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಸಲಿಂಗ ಪ್ರೇಮ ಆನುವಂಶಿಕ ಖಾಯಿಲೆ ಎಂದಿರುವುದಲ್ಲದೆ ಇದು ಬಿಜೆಪಿ ಪಕ್ಷದ ಅಭಿಮತ ಕೂಡ ಎಂದು ತಿಳಿಸಿ ವಿವಾದ ಸೃಷ್ಟಿಸಿದ್ದಾರೆ.

"ಇದು ಗೌರವದ ಪ್ರಶ್ನೆಯಲ್ಲ. ನಾವು ವಿಕಲಾಂಗರನ್ನು ಗೌರವಿಸುತ್ತೇವೆ. ಸಲಿಂಗಿಗಳು ಆನುವಂಶಿಕ ವಿಕಲಾಂಗತೆ ಹೊಂದಿರುವವರು" ಎಂದಿದ್ದಾರೆ ಸ್ವಾಮಿ.

ಸಲಿಂಗ ಪ್ರೇಮ ಕ್ರಿಮಿನಲ್ ಅಪರಾಧ ಎನ್ನುವ ಕಾಯ್ದೆ ೩೭೭ ತಿದ್ದುಪಡಿಗೆ ಸರ್ಕಾರ ಚಿಂತಿಸುತ್ತಿದೆ ಎಂದು ಮೊದಲು ತಿಳಿಸಿ ನಂತರ ಅಲ್ಲಗೆಳೆದಿದ್ದ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಅವರ ಹೇಳಿಕೆಯ ನಂತರ ಈಗ ಬಿಜೆಪಿಯ ಇನ್ನೊಬ್ಬ ಮುಖಂಡ ಪ್ರತಿಕ್ರಿಯಿಸಿರುವುದು ಆ ವಿಷಯದ ಬಗ್ಗೆ ತೀವ್ರ ಚರ್ಚೆಗಳಾಗುವ ಸಾಧ್ಯತೆಯಿದೆ.

ಸಲಿಂಗ ಮದುವೆ ಕಾನೂನು ಬಾಹಿರ ಎಂದಿರುವ ಸುಪ್ರೀಮ್ ಕೋರ್ಟ್ ತೀರ್ಪನ್ನು ಬದಲಾಯಿಸಿ ಕಾನೂನು ಮಾಡುವ ಯಾವುದೇ ಪ್ರಸ್ತಾವನೆ ಸಚಿವಾಲಯದ ಮುಂದಿಲ್ಲ ಎಂದಿದ್ದಾರೆ ಸದಾನಂದ ಗೌಡ.

SCROLL FOR NEXT