ಕಾನ್ಶಿ ರಾಮ್ ಮತ್ತು ಧ್ಯಾನ್ ಚಂದ್ 
ಪ್ರಧಾನ ಸುದ್ದಿ

ಧ್ಯಾನ್ ಚಂದ್, ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್‌ಗೆ ಭಾರತರತ್ನ ನೀಡಿ

ರಾಷ್ಟ್ರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಮತ್ತು ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್‌ಗೆ ...

ನವದೆಹಲಿ: ರಾಷ್ಟ್ರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಮತ್ತು ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್‌ಗೆ ನೀಡಿ ಎಂಬ ಕೂಗು ಮಂಗಳವಾರ ರಾಜ್ಯಸಭೆಯಲ್ಲಿ  ಕೇಳಿಬಂದಿದೆ.

ಶೂನ್ಯವೇಳೆಯಲ್ಲಿ ಮಾತನಾಡಿದ ಬಿಜೆಡಿ ಸಂಸದ ದಿಲೀಪ್ ಕುಮಾರ್ ತಿರ್ಕೆ, ಧ್ಯಾನ್‌ಚಂದ್ ಅವರು   1928, 1932 ಮತ್ತು 1936ರ್ಲಲಿ ನಡೆದ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ 185 ಪಂದ್ಯಗಳನ್ನಾಡಿರುವ ಅವರು 570 ಗೋಲುಗಳನ್ನು ದಾಖಲಿಸಿದ್ದರು.  ಎರಡು ಒಲಿಂಪಿಕ್ಸ್ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಕ್ರೀಡಾಪಟು ಅವರು. 1936ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಅವರ  ಪ್ರದರ್ಶನ ಕಂಡು ಹಿಟ್ಲರ್,  ಜರ್ಮನ್ ಸೇನಾಪಡೆಯಲ್ಲಿ ಕರ್ನಲ್ ಹುದ್ದೆ ಸ್ವೀಕರಿಸುವಂತೆ ಪ್ರಸ್ತಾಪ ನೀಡಿದ್ದರು. ಅಗಸ್ಟ್ 26 ಧ್ಯಾನ್‌ಚಂದ್ ಅವರ ಹುಟ್ಟಿದ ದಿನ. ಆ ದಿನವನ್ನು ಖೇಲ್ ದಿವಸ್ ಎಂದು ಆಚರಿಸಲಾಗುತ್ತದೆ. 20ನೇ ಶತಮಾನದ ಮಹಾನ್ ಆಟಗಾರ ಅವರು. ಆದ್ದರಿಂದ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಅದೇ ವೇಳೆ ಬಹುಜನ್ ಸಮಾಜ ಪಕ್ಷದ ಸಂಸದ ನರೇಂದ್ರ ಕುಮಾರ್ ಕಶ್ಯಪ್ ಅವರು ಪಕ್ಷದ ಸಂಸ್ಥಾಪಕ ಕಾನ್ಶಿ ರಾಮ್ ಅವರಿಗೂ ಭಾರತ ರತ್ನ ನೀಡಬೇಕೆಂಬ ಬೇಡಿಕೆಯನ್ನೊಡಿದರು.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT