ಪ್ರಧಾನ ಸುದ್ದಿ

ಇಂಗ್ಲೆಂಡಿನ ಭಾರತೀಯ ಮೂಲದ ಸಂಸದ ಅಭ್ಯರ್ಥಿ ಪಟ್ಟಿಯ ಮೂಂಚೂಣಿಯಲ್ಲಿ ಮೂರ್ತಿ ಅಳಿಯ

Guruprasad Narayana

ಲಂಡನ್: ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್, ಮೇ ೭ರಂದು ನಡೆಯಲಿರುವ ಯು ಕೆ ಚುನಾವಣೆಯಲ್ಲಿ 'ಕನ್ಸರ್ವೇಟಿವ್ ಪಕ್ಷ'ದಿಂದ ಗೆಲ್ಲುವ ಮುಂಚೂಣಿ ಕುದುರೆಯಾಗಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ಅವರ ಕ್ಷೇತ್ರವಾದ ನಾರ್ತ್ ಯಾರ್ಕ್ಷೈರ್ ನ ರಿಚ್ಮಂಡ್ ನಿಂದ ರಿಷಿ ಸುನಕ್ ಸ್ಪರ್ಧಿಸಲಿದ್ದಾರೆ.

ಆಕ್ಸಫರ್ಡ್ ಮತ್ತು ಸ್ಟಾನ್ಫರ್ಡ್ ವಿಶ್ವವಿದ್ಯಾಲಯಗಳಿಂದ ಎಂಬಿಎ ಪದವೀಧರ, ೧ ಬಿಲಿಯನ್ ಪೌಂಡ್ ಮೌಲ್ಯದ ಜಾಗತಿಕ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ರಿಷಿ ಬ್ರಿಟಿಶ್ ಉದ್ಯಮದ ಹೂಡಿಕೆಯಲ್ಲಿ ಬಹು ಪರಿಣಿತರು. ಈಗ ಭಾರತೀಯ ಮೂಲದ ಸಂಸದರಾಗಿ 'ಕ್ಲಾಸ್ ಆಫ್ ೨೦೧೫' ರಲ್ಲಿ ಸ್ಥಾನ ಪಡೆಯುವ ಅಭ್ಯರ್ಥಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

"ನಾನು ಚಂದ್ರನ ಮೇಲಿದ್ದೇನೆ. ವಿಶ್ವದ ವಿಶೇಷ ಪ್ರದೇಶವನ್ನು ಪ್ರತಿನಿಧಿಸುವುದು ವಿಶೇಷ ಗೌರವ ಮತ್ತು ವಿಲಿಯಂ ಹೇಗ್ ಅವರ ಹೆಜ್ಜೆಗಳನ್ನು ಅನುಸರಿಸಲಿದ್ದೇನೆ" ಎಂದು ರಿಷಿ ತಿಳಿಸಿದ್ದಾರೆ.

ಹೊಸ ಅಧ್ಯಯನವೊಂದರ ಪ್ರಕಾರ ಈ ಬಾರಿ ವಿಪಕ್ಷ ಲೇಬರ್ ಪಕ್ಷಕ್ಕಿಂತ ಕನ್ಸರ್ವೇಟಿವ್ ಪಕ್ಷದಿಂದ ಹೆಚ್ಚು ಜನ ಜನಾಂಗೀಯ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

SCROLL FOR NEXT