ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ ೬೬ಎ ಮಾನ್ಯತೆಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಸ್ವಾಗತಿಸಿದ್ದಾರೆ. ಇದರ ಕರಡನ್ನು ಸರಿಯಾಗಿ ಸಿದ್ಧಪಡಿಸಿರಲಿಲ್ಲ ಮತ್ತು ಅಸಂವಿಧಾನಕ ಎಂದಿದ್ದಾರೆ.
"ಐಟಿ ಕಾಯ್ದೆಯ ಸೆಕ್ಷನ್ ೬೬ಎ ಅಸಂವಿಂಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇನೆ. ಈ ಭಾಗದ ಕರಡನ್ನು ಸರಿಯಾಗಿ ಸಿದ್ಧಪಡಿಸಿರಲಿಲ್ಲ. ಇದರ ದುರ್ಬಳಕ್ಕೆ ಸಾಧ್ಯವಿತ್ತು, ದುರ್ಬಳಕೆಯಾಗಿತ್ತು ಕೂಡ" ಎಂದು ಅವರು ತಿಳಿಸಿದ್ದಾರೆ.
ಈಗ ವಾಕ್ ಸ್ವಾತಂತ್ರ್ಯದ ದುರ್ಬಳಕೆಯಾದ ಪ್ರಕರಣಗಳಿಗೆ ಸಾಮಾನ್ಯ ಕಾನೂನಿನಡಿಯೇ ಶಿಕ್ಷೆಗೆ ಒಳಪಡಿಸಬಹುದು ಎಂದು ಹಿಂದಿನ ಯುಪಿಎ ಸರ್ಕಾರದಲ್ಲಿ ಗೃಹ ಖಾತೆ, ಹಣಕಾಸು ಖಾತೆಗಳನ್ನು ನಿರ್ವಹಿಸಿದ್ದ ಚಿದಂಬರಂ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕರ ಟೀಕೆಗಳನ್ನು ಮಾಡುವವರನ್ನು ಕೂಡ ಬಂಧಿಸಬಹುದಾದ ಐಟಿ ಕಾಯ್ದೆಯ ಈ ವಿಭಾಗವನ್ನು ಅಸಂವಿಧಾನಕ ಎಂದು ನ್ಯಾಯಾಧೀಶ ನಾರಿಮನ್ ಇಂದು ನ್ಯಾಯಾಲಯದಲ್ಲಿ ತೀರ್ಪು ನೀಡಿದ್ದರು.