ಪ್ರಧಾನ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ

Lingaraj Badiger

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ 2014-2015ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಉಡುಪಿ ಜಿಲ್ಲೆ ಶೇ.93.37ರಷ್ಟು ಫಲಿತಾಂಶ ಪಡೆಯುವ ಮೂಲ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಎರಡನೇ ಹಾಗೂ ಉತ್ತರ ಕನ್ನಡ ಮೂರನೇ ಸ್ಥಾನ ಪಡೆದಿವೆ.

ಇಂದು ಮಧ್ಯಾಹ್ನ ಮಲ್ಲೇಶ್ವರಂನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪ್ರೌಢ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೋಯಿಸೀನ್ ಅವರು, ಈ ವರ್ಷ ಒಟ್ಟಾರೆ ಶೇ 81.82 ಫಲಿತಾಂಶ ಬಂದಿದೆ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.86.23 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 77.85 ಬಾಲಕರು ಉತ್ತೀರ್ಣರಾಗಿದ್ದಾರೆ ಎಂದರು.

ಫಲಿತಾಂಶ ಮೊಬೈಲ್ ಫೋ ನ್‍ನಲ್ಲೂ ಲಭ್ಯವಾಗಲಿದೆ.  www.karnatakaonline.in  ಮತ್ತು  www.karnatakaonline.in www.examresults.net ನಲ್ಲಿ ಫಲಿತಾಂಶ ದೊರೆಯಲಿದೆ. ಈ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳು ದೇಶದ ಯಾವುದೇ ಭಾಗದಲ್ಲಿದ್ದರೂ ಫಲಿತಾಂಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಅಪ್ಲಿಕೇಷನನ್ನು www.indiaonline.in ಹಾಗೂwww.karnatakaonline.in  ಗೂಗಲ್ ಪ್ಲೇ ಸ್ಟೋರ್ ಮೂಲಕ ಫಲಿತಾಂಶವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಕ್ವಿನ್ ಸ್ಟ್ರೀಟ್ ಇಂಡಿಯಾ ಮಾರ್ಕೆಟಿಂಗ್ ಮತ್ತು ಮೀಡಿಯಾ ಪ್ರೈ. ಲಿ. ನ www.examresults.netwww.karnatakaeducation.net, www.bangaloreeducation.net, http://results.karnatakaeducation.netsms-KARRegistration number send it to +919811554192, +919873698968, ಟೈಮ್ಸ್  ಇಂಟರ್ ನೆಟ್ ಲಿಮಿಟೆಡ್, SMS KR10roll number send to 58888  ಅಥವಾwww.knowyourresult.com  ದೂ.+919580122011 ಅಮರ್ ಉಜಾಲಾ ಪಬ್ಲಿಕೇಷನ್ಸ್ ಪ್ರೈವೇಟ್ ಲಿ. www.results.amarujala.com ದೂ.91-8373914257.

SCROLL FOR NEXT