ಗೌಹಾಟಿ: ಭಾರತೀಯ ಯುದ್ಧ ವಿಮಾನ ಐ ಎ ಎಫ್ ಸುಖಾಯ್ ಎಸ್ ಯು-30ಎಂಕೆಐ ಅಸ್ಸಾಮಿನ ನಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು ೧೨:೩೦ಕ್ಕೆ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇಬ್ಬರೂ ವಿಮಾನ ಚಾಲಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಯಲಾಗಿದೆ.
ತೇಜಪುರ ವಿಮಾನಯಾನ ಅಡ್ಡೆಯಿಂದ ಈ ಯುದ್ಧವಿಮಾನ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಯುದ್ಧವಿಮಾನ ಮೇಲಕ್ಕೆ ಹಾರಿದಾಕ್ಷಣ ತಾಂತ್ರಿಕ ತೊಂದರೆಗಳು ತಲೆದೋರಿದ್ದರಿಂದ ವಿಮಾನಚಾಲಕರು ವಿಮಾನವನ್ನು ತೊರೆಯಬೇಕಾಯಿತು. ಇಬ್ಬರೂ ವಿಮಾನಚಾಲಕರು ಸುರಕ್ಷಿತವಾಗಿದ್ದು, ವಿಮಾನ ತೇಜಪುರದ ದಟ್ಟ ಅರಣ್ಯದಲ್ಲಿ ಸ್ಪೋಟಗೊಂಡಿದೆ.
"ಈ ಅಪಘಾತಕ್ಕೆ ಕಾರಣ ತಿಳಿಯಲು ನ್ಯಾಯಾಲಯ ತನಿಖೆಯನ್ನು ಆದೇಶಿಸಲಾಗಿದೆ" ಎಂದು ತಂಡದ ಕ್ಯಾಪ್ಟನ್ ಮತ್ತು ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಜನ್ ಹೇಳಿಕೆ ನೀಡಿದ್ದಾರೆ.