ಪ್ರಧಾನ ಸುದ್ದಿ

ಪಶ್ಚಿಮಬಂಗಾಳದ ಮೊದಲ ಪಾರಂಪರಿಕ ನಗರವಾಗಿ ರೂಪುಗೊಳ್ಳಲಿದೆ ಬಿಷ್ಣುಪುರ

Srinivas Rao BV

ಕೋಲ್ಕತಾ: ಮಧ್ಯಕಾಲೀನ ಟೆರಾಕೋಟಾ ದೇವಾಲಯಗಳು ಹಾಗೂ ವೈಭವದ ಇತಿಹಾಸ ಹೊಂದಿರುವ ಬಿಷ್ಣುಪುರ್, ಪಶ್ಚಿಮ ಬಂಗಾಳದ ಮೊದಲ ಪಾರಂಪರಿಕ ನಗರವಾಗಲಿದೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿದ್ದು ಮಲ್ಲ ರಾಜವಂಶದ ಅಧಿಕಾರದ ಸ್ಥಾನವಾಗಿತ್ತು. 17 -18  ಶತಮಾನದಲ್ಲಿ ನಿರ್ಮಾಣವಾದ ಟೆರಾಕೋಟಾ ದೇವಾಲಯಗಳು  ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದ್ದು ಪಾರಂಪರಿಕ ಮೆರಗನ್ನು ಹೆಚ್ಚಿಸಿವೆ. ಯೋಜಿತ ರೀತಿಯಲ್ಲಿ ನಿರ್ಮಾಣವಾಗದ ಈ ಪ್ರದೇಶವನ್ನು ರಾಜ್ಯದ ಪ್ರಥಮ ಪಾರಂಪರಿಕ ನಗರವನ್ನಾಗಿ ಘೋಷಿಸಿ ರಸ್ತೆ ಸಂಪರ್ಕ, ವಸ್ತುಸಂಗ್ರಹಾಲಯಗಳು, ಉದ್ಯಾನವನ, ಹೋಟೆಲ್ ಗಳನ್ನು   ಅಭಿವೃದ್ಧಿಪಡಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದ್ದು ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿ ನೀಡಿದೆ ಎಂದು ಪುರಾತತ್ವ ಶಾಸ್ತ್ರ ಮತ್ತು ವಸ್ತು ಸಂಗ್ರಹಾಲಯ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಪ್ರಭಾಕರ್ ಪಾಲ್ ತಿಳಿಸಿದ್ದಾರೆ.   

14 ನೇ ಹಣಕಾಸು ಆಯೋಗದಿಂದ ಹಣಕಾಸಿನ ನೆರವಿನ ಮೂಲಕ, ಕೋಲ್ಕತಾದಿಂದ ಸುಮಾರು 150 ಕಿ.ಮಿ ದೂರದಲ್ಲಿರುವ ಬಿಷ್ಣುಪುರ್ ಅಲ್ಲಿನ ಮೊದಲ ಪಾರಂಪರಿಕ ನಗರದ ಅಭಿವೃದ್ಧಿಯಾಗಲಿದೆ. ಪುರಾತನ ಶಿಲ್ಪಕಲೆ, ಸ್ಮಾರಕಗಳನ್ನು ಹೊಂದಿರುವ ಬಿಷ್ಣುಪುರ್,  ಬಲುಚಾರಿ ಸೀರೆ, ಟೆರಾಕೋಟಾ ಗೊಂಬೆ ಬಂಕುರಾ ಕುದುರೆಗಳಿಂದಾಗಿ ಪ್ರವಾಸಿಗರನ್ನು ಆಕರ್ಷನಿಯ ತಾಣವಾಗಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸಹಕಾರದಲ್ಲಿ ಬಿಷ್ಣುಪುರ್ ಅಭಿವೃದ್ಧಿಯಾಗಲಿದೆ. 

SCROLL FOR NEXT