ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ತೆಲಂಗಾಣ ಅಣೆಕಟ್ಟಿನಲ್ಲಿ ಮುಳುಗಿದ ೬ ಯುವ ಬಾಲಕರು

ತೆಲಂಗಾಣದ ಕರೀಂನಗರ ಜಿಲ್ಲೆಯ ಅಣೆಕಟ್ಟಿನಲ್ಲಿ ಸೋಮವಾರ ಆರು ಯುವ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್: ತೆಲಂಗಾಣದ ಕರೀಂನಗರ ಜಿಲ್ಲೆಯ ಅಣೆಕಟ್ಟಿನಲ್ಲಿ ಸೋಮವಾರ ಆರು ಯುವ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನಾನಕ್ಕಾಗಿ ೮ ರಿಂದ ೧೩ ವರ್ಷದ ಒಳಗಿನ ಬಾಲಕರು ಕರೀಂನಗರ ಹೊರವಲಯದ ಪದಮನಗರ ಕೆಳ ಮನೈರ್ ಡ್ಯಾಮ್ ನಲ್ಲಿ ಇಳಿದಾಗ ಈ ಘಟನೆ ನಡೆದಿದೆ.

ಹತ್ತಿರದ ಮೈದಾನದಲ್ಲಿ ಕ್ರಿಕೆಟ್ ಆಡಿದ್ದ ಈ ಬಾಲಕರು ಸ್ನಾನಕ್ಕಾಗಿ ಅಣೆಕಟ್ಟಿಗೆ ಇಳಿದ ಪರಿಣಾಮ ಒಬ್ಬರ ನಂತರ ಇನ್ನೊಬ್ಬರು ಎಲ್ಲರೂ ಮುಳುಗಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ಮನೆ ತಲುಪದಿದ್ದರಿಂದ ಅವರನ್ನು ಹುಡುಕುತ್ತಾ ಬಂದ ಪೋಷಕರು ಅಣೆಕಟ್ಟಿನ ದಡದಲ್ಲಿ ನೀರಿಗೆ ಇಳಿಯದ ಅವರ ಸ್ನೇಹಿತನೊಬ್ಬ ಅಘಾತಕ್ಕೊಳಗಾಗಿ ಕುಳಿತಿದ್ದನ್ನು ನೋಡಿದ್ದಾರೆ.

ನಂತರ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದು ಆರು ಸಂತ್ರಸ್ತ ಬಾಲಕರ ದೇಹಗಳನ್ನು ಪತ್ತೆ ಹಚ್ಚಿ ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿರೋಧ ಪಕ್ಷದ ಗದ್ದಲದ ನಡುವೆ ಸಂಸತ್ತಿನಲ್ಲಿ ಮೋದಿ ಸರ್ಕಾರದಿಂದ ಡೀಲಿಮಿಟೇಷನ್ ಮಸೂದೆಗೆ ಮರು ಜೀವ?

ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು!

'ಟ್ರಬಲ್ ಶೂಟರ್‌' ಡಿಕೆಶಿ​ಗೆ ಖಾತೆ ಹಂಚಿಕೆ ಟ್ರಬಲ್: ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ಹಾರಿದ ಸಚಿವ ಕೃಷ್ಣ ಬೈರೇಗೌಡ

'ಅಟ್ರಾಕ್ಟಿವ್ ಹುಡುಗಿಯರ ಕಡೆಗೆ ಆಕರ್ಷಿತನಾಗಿದ್ದೇನೆ, ಆದ್ರೂ...' : ಸುದೀರ್ಘ ದಾಂಪತ್ಯದ ರಹಸ್ಯ ಬಿಚ್ಚಿಟ್ಟ ಆರ್. ಮಾಧವನ್

ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ: ನಮ್ಮ ಮೆಟ್ರೋಗೆ ಭಾರೀ ನಷ್ಟ; ಸಾಲ ಮರುಪಾವತಿ ಹೊರೆ ಹೆಚ್ಚಳ!

SCROLL FOR NEXT