ಪ್ರಧಾನ ಸುದ್ದಿ

ಮೊದಲ ಹಂತದ ಪಂಚಾಯ್ತಿ ಚುನಾವಣೆ: ಮತದಾನ ಆರಂಭ

Vishwanath S

ಬೆಂಗಳೂರು: ಗ್ರಾಮಪಂಚಾಯಿತಿ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ 3,154 ಗ್ರಾಮ ಪಂಚಾಯ್ತಿಗಳಿಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಗೆ ಮತದಾರರು ಮತಕಟ್ಟೆಗಳತ್ತ ಬಂದು ಮತದಾನಕ್ಕೆ ಸಾಲು ಗಟ್ಟಿ ನಿಂತಿದ್ದಾರೆ.

ಮೈಸೂರು, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ. ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಹಾಗೂ ಗದ ಜಿಲ್ಲೆಗಳಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಸುಮಾರು 3,154 ಗ್ರಾಮ ಪಂಚಾಯ್ತಿಗಳ 43 ಸಾವಿರದ 548 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಂದು ಲಕ್ಷದ 19 ಸಾವಿರದ 650 ಅಭ್ಯರ್ಥಿಗಳು ಕಣದಲ್ಲಿದ್ದು, 54,655 ಮಹಿಳಾ, 64,996 ಪುರುಷ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.

SCROLL FOR NEXT