'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ 
ಪ್ರಧಾನ ಸುದ್ದಿ

'ಮೊಂಡು' ಪ್ರಧಾನಿ ಎಲ್ಲರ 'ಮನದ ಮಾತಿಗೆ' ಕಿವುಡಾಗಿದ್ದಾರೆ: ಕಾಂಗ್ರೆಸ್

ಭಾರತ 'ಸಹನೆಯ ಸಮಾಜ' ಎಂದು ಕೇಂದ್ರ ಸರ್ಕಾರ ಹೇಳಿದ ದಿನದ ನಂತರ ಎನ್ ಡಿ ಎ ಆಡಳಿತದ ಸರ್ಕಾರದ ಮೇಲೆ ಸೋಮವಾರ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ ಇಂದಿನ ಘಟನೆಗಳನ್ನು

ನವದೆಹಲಿ: ಭಾರತ 'ಸಹನೆಯ ಸಮಾಜ' ಎಂದು ಕೇಂದ್ರ ಸರ್ಕಾರ ಹೇಳಿದ ದಿನದ ನಂತರ ಎನ್ ಡಿ ಎ ಆಡಳಿತದ ಸರ್ಕಾರದ ಮೇಲೆ ಸೋಮವಾರ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ ಇಂದಿನ ಘಟನೆಗಳನ್ನು ನೋಡಿದರೆ ದೇಶ ವಿನಾಶದತ್ತ ಮುನ್ನುಗ್ಗುತ್ತಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರ ಕಳಕಳಿಗೆ ಕಿವುಡಾಗಿದ್ದಾರೆ ಎಂದು ಆರೋಪಿಸಿದೆ.

"ದೇಶದಲ್ಲಿ ಭಯದ ಕಿಚ್ಚು ಹಚ್ಚಲಾಗಿದೆ ಆದರೆ ಸರ್ಕಾರಕ್ಕೆ ಅದು ಅರ್ಥವಾಗುತ್ತಿಲ್ಲ. ಅವರ ವಿರುದ್ಧ ಮಾತನಾಡುವವರನ್ನೆಲ್ಲಾ ಶತ್ರುಗಳು ಅಥವಾ ಕಾಂಗ್ರೆಸ್ ಮಿತ್ರ ಎಂದು ಅವರು ಕರೆಯುತ್ತಿದ್ದಾರೆ. ಆರ್ ಎಸ್ ಎಸ್ ಹಿಡಿತದಲ್ಲಿರುವ ಸರ್ಕಾರಕ್ಕೆ ಅಸಹನೆ ಹೆಚ್ಚುತ್ತಿರುವುದೇ ಬೇಕಾಗಿದೆ. ಆದುದರಿಂದ ಅವರು ಚುನಾವಣೆಗಳನ್ನು ಗೆಲ್ಲಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ಮುಖಂಡ ರಶೀದ್ ಆಳವಿ ಹೇಳಿದ್ದಾರೆ.

"ಪ್ರಧಾನಿ ಮೋದಿ ಪ್ರತಿ ತಿಂಗಳು ರೇಡಿಯೋದಲ್ಲಿ ಆರ್ ಎಸ್ ಎಸ್ 'ಮನ್ ಕಿ ಬಾತ್' (ಮನದ ಮಾತು) ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಇದೆ ಹಾದಿಯಲ್ಲಿ ಸರ್ಕಾರ ಮುಂದುವರೆದರೆ ದೇಶ ವಿನಾಶದತ್ತ ಮುನ್ನಡೆಯಲಿದೆ. ಇದು ಕಳವಳದ ಸಂಗತಿ" ಎಂದು ಅವರು ಹೇಳಿದ್ದಾರೆ.

"ದೇಶದ ಚಿಂತಕರು ಪ್ರತಿಭಟಿಸುತ್ತಿರುವುದರಲ್ಲಿ ಅರ್ಥವಿದೆ. ಆರ್ ಎಸ್ ಎಸ್ ನಿಂದ ದೂರವುಳಿಯಲು ಸರ್ಕಾರಕ್ಕೆ ಇದು ಸಕಾಲ" ಎಂದು ಅವರು ಹೇಳಿದ್ದಾರೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

SCROLL FOR NEXT