ಪ್ರಧಾನ ಸುದ್ದಿ

ಬಿಹಾರ: ಚುನಾವಣೋತ್ತರ ಸಮೀಕ್ಷೆಯಲ್ಲಿ ನಿತಿಶ್ ನೇತೃತ್ವದ ಮಹಾಮೈತ್ರಿಗೆ ಮುನ್ನಡೆ

Lingaraj Badiger

ಪಾಟ್ನಾ: ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಗುರುವಾರ ಸಂಜೆ ಮುಕ್ತಾಯಗೊಂಡಿದ್ದು, ಭಾನುವಾರ ಮತದಾರನ ತೀರ್ಪು ಹೊರ ಬೀಳಲಿದೆ.

ಈ ನಡುವೆ ಅಂತಿಮ ಹಂತದ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಹಲವು ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು ಸಿವೋಟರ್ ಸಮೀಕ್ಷೆ ಹೇಳಿದೆ.

ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿಕೂಟ 122 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಎನ್‌ಡಿಎ ಮೈತ್ರಿಕೂಟ 111 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, 10 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಬಿಹಾರ ವಿಧಾನಸಭೆ ಒಟ್ಟು 243 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚನೆಗೆ 122 ಸ್ಥಾನಗಳ ಅಗತ್ಯ ಇದೆ.

ಮಹಾಮೈತ್ರಿಕೂಟ ಪಕ್ಷಗಳಾದ ಜೆಡಿಯು 67 ಸ್ಥಾನಗಳಲ್ಲಿ, ಆರ್‌ಜೆಡಿ 47 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ 91 ಸ್ಥಾನಗಳಲ್ಲಿ, ಎಲ್‌ಜೆಪಿ 7 ಸ್ಥಾನಗಳಲ್ಲಿ, ಎಚ್‌ಎಎಂ 9 ಸ್ಥಾನಗಳಲ್ಲಿ ಹಾಗೂ ಆರ್‌ಎಲ್‌ಎಸ್‌ಪಿ 4 ಸ್ಥಾನಗಳಲ್ಲಿ ಜಯ ಸಾಧಿಸಲಿವೆ.

ಇಂಡಿಯಾ ಟಿವಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಮಹಾಮೈತ್ರಿಕೂಟ 112ರಿಂದ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಎನ್ ಡಿಎ 101ರಿಂದ 121 ಸ್ಥಾನಗಳಲ್ಲಿ ಹಾಗೂ ಇತರರು 6ರಿಂದ 14 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.

ಇಂಡಿಯಾ ಟುಡೇ ಹಾಗೂ ಸಿಸಿರೋ ಸಮೀಕ್ಷೆ ಮಹಾಮೈತ್ರಿಕೂಟ ಹಾಗೂ ಎನ್ ಡಿಎ ನಡುವೆ ನೇರ ಹಣಾಹಣಿ ಇದೆ ಎಂದಿದೆ.

ಇನ್ನೂ ಐಟಿಜಿ ಸಿಸಿರೋ ಸಮೀಕ್ಷೆ ಪ್ರಕಾರ, ಎನ್ ಡಿಎ 113-127, ಮಹಾಮೈತ್ರಿ 111-123, ಇತರರು 4-8

SCROLL FOR NEXT