ಇಂಗ್ಲೆಂಡ್ ಪ್ರಧಾನಿ ಕೆಮರೂನ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ 
ಪ್ರಧಾನ ಸುದ್ದಿ

9 ಬಿಲಿಯನ್ ಪೌಂಡ್ಸ್ ಒಪ್ಪಂದಕ್ಕೆ ಭಾರತ-ಯುಕೆ ಸಹಿ

3 ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಬರೊಬ್ಬರಿ 9 ಬಿಲಿಯನ್ ವಾಣಿಜ್ಯಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ...

ಲಂಡನ್: 3 ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಬರೊಬ್ಬರಿ 9 ಬಿಲಿಯನ್ ವಾಣಿಜ್ಯಾತ್ಮಕ  ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಮೂಲಗಳ ಪ್ರಕಾರ ಉಭಯ ದೇಶಗಳ ನಾಯಕರು ನಾಗರಿಕ ಪರಮಾಣು ಒಪ್ಪಂದ, ಮಿಲಿಟರಿ ತಂತ್ರಜ್ಞಾನದಲ್ಲಿ ಸಹಭಾಗಿತ್ವ ಮತ್ತು ಸೈಬರ್ ಭದ್ರತೆ ಕುರಿತಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು  9 ಬಿಲಿಯನ್ ಪೌಂಡ್ಸ್ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ರೈಲ್ವೇ ರುಪಾಯಿ ಬಾಂಡ್ ಪ್ರಾರಂಭಿಸುವ ಕುರಿತು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.  ಉಭಯ ದೇಶಗಳ ನಡುವಿನ ಈ ಒಪ್ಪಂದವನ್ನು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಹೊಸ ಕ್ರಿಯಾತ್ಮಕ ಆಧುನಿಕ ಪಾಲುದಾರಿಕೆ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಇಂಗ್ಲೆಂಡ್ ಭಾರತದಲ್ಲಿ ಹೂಡುವ ಎಫ್ ಡಿಐ ಪ್ರಮಾಣವನ್ನು 8.5ಕ್ಕೇ ಏರಿಕೆ ಮಾಡಿದ್ದು, ಇಂಡೋ-ಯುಕೆ ನಡುವಿನ ಈ ನೂತನ ಒಪ್ಪಂದದಿಂದಾಗಿ ಭಾರತದಲ್ಲಿ ಒಟ್ಟು 1 ಲಕ್ಷದ  10 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಇಂಗ್ಲೆಂಡ್ ನ ಹೆಚ್ ಎಸ್ ಬಿಸಿ ಬ್ಯಾಂಕ್ ಭಾರತದಲ್ಲಿ 10 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಸ್ಕಿಲ್ ಫಾರ್  ಇಂಡಿಯಾ ಎಂಬ ನೂತನ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ಈ ನೂತನ ಕಾರ್ಯಕ್ರಮದಿಂದಾಗಿ ಭಾರತದಲ್ಲಿರುವ ಸುಮಾರು 75 ಸಾವಿರ ಅಂಗವಿಕಲ ಯುವಕರಿಗೆ ಮತ್ತು 5 ವರ್ಷದ  ಮೇಲ್ಪಟ್ಟ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಇದಲ್ಲದೆ ವಿಮಾ ಯೋಜನೆಯಲ್ಲಿ ಇಂಗ್ಲೆಂಡ್ ನ ಸಹ ಭಾಗಿತ್ವ ಮುಂದುವರೆಯಲಿದ್ದು, ಮಿಮೆ ಮೇಲಿರುವ ಎಫ್ ಡಿಐ ಪ್ರಮಾಣವನ್ನು ಯುಕೆ ಸರ್ಕಾರ ಏರಿಕೆ ಮಾಡಿದೆ. ಇನ್ನು ಪೆಂಷನ್  ವಿಭಾದಲ್ಲಿನ ಎಫ್ ಡಿಐ ಅನ್ನು ಶೇ.49ಕ್ಕೇ ಏರಿಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!