ಪ್ರಧಾನ ಸುದ್ದಿ

ಟಿಪ್ಪು ವಿವಾದ: ಹೈದರಾಬಾದ್‌ನಲ್ಲಿ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ

Lingaraj Badiger

ಹೈದರಾಬಾದ್: ಟಿಪ್ಪು ಸುಲ್ತಾನ್ ಜನ್ಮದಿನ ಆಚರಣೆ ಹಾಗೂ ಮಡಿಕೇರಿ ಗಲಭೆಯಲ್ಲಿ ಮೃತಪಟ್ಟ ಕುಟ್ಟಪ್ಪ ಸಾವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶುಕ್ರವಾರ ಹೈದರಾಬಾದ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೊಲೀಸರ ಪ್ರಕಾರ, ಸುಲ್ತಾನ್ ಬಜಾರ್ ಪ್ರದೇಶದಲ್ಲಿ ಕೆಲವು ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

'ನಾವು ಪ್ರತಿಭಟನಾಕಾರರ ಗುಂಪನ್ನು ಚದುರಿಸಿದ್ದೇವೆ. ಯಾರನ್ನೂ ಬಂಧಿಸಿಲ್ಲ' ಎಂದು ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಪಿ. ಶಿವಶಂಕರ್ ರಾವ್ ಅವರು ಹೇಳಿದ್ದಾರೆ.

ಮಡಿಕೇರಿಯಲ್ಲಿ ನಮ್ಮ ನಾಯಕ ಡಿ.ಎಸ್.ಕುಟ್ಟಪ್ಪ ಹತ್ಯೆಯನ್ನು ಖಂಡಿಸಿ ನಾವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದ್ದೇವೆ ಎಂದು ಬಜರಂಗ ದಳದ ಗ್ರೇಟರ್ ಹೈದರಾಬಾದ್ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ.

SCROLL FOR NEXT