ಪ್ರಧಾನ ಸುದ್ದಿ

ಪದಕ ಹಿಂದಿರುಗಿಸುವುದು ದೇಶಕ್ಕೆ ಮಾಡುವ ಅಪಮಾನ: ಪರಿಕ್ಕರ್

Mainashree
ನವದೆಹಲಿ: ದೇಶಕ್ಕಾಗಿ ಮಾಡಿದ ತ್ಯಾಗಕ್ಕಾಗಿ ಸೈನಿಕರಿಗೆ ನೀಡಲಾಗಿದ್ದ ಪದಕಗಳನ್ನು ಹಿಂದಿರುಗಿಸುವ ಮೂಲಕ ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಿಷಾಧ ವ್ಯಕ್ತಪಡಿಸಿದ್ದಾರೆ. 
ಏಕೆ ಶ್ರೇಣಿ ಏಕ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ನಿವೃತ್ತ ಯೋಧರು ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಸೇವೆ ಮೆಚ್ಚಿ ಸರ್ಕಾರ ನೀಡಿದ್ದ ಪದಕಗಳನ್ನು ಹಿಂದಿರುಗುಸುತ್ತಿದ್ದು, ಕೆಲವರು ಪದಕಗಳನ್ನು ಸುಡುಲು ಪ್ರಯತ್ನಿಸುತ್ತಿದ್ದಾರೆ. 
ನಿವೃತ್ತ ಸೈನಿಕರ ಈ ಆವೇಶವನ್ನು ಖಂಡಿಸಿರುವ ಕೇಂದ್ರ ಸಚಿವ ಮನೋಹರ್ ಪರಿಕ್ಕರ್, ದೇಶಕ್ಕಾಗಿ ದುಡಿದ ಸೈನಿಕರಿಗೆ ಪದಕಗಳನ್ನು ನೀಡಿ ಗೌರವ ಸಲ್ಲಿಸಲಾಗಿದೆ. ಅದು ದೇಶದ ಹೆಮ್ಮೆಯಾಗಿದೆ. ಅಂತಹ ಪದಕಗಳನ್ನು ವಾಪಸ್ ಮಾಡುವುದು ದೇಶಕ್ಕೆ ಅಪಮಾನ ಮಾಡಿದಂತೆ ಎಂದು ಹೇಳಿದ್ದಾರೆ. 
ಇನ್ನು ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸುತ್ತಿಲ್ಲ ಎಂಬುದನ್ನು ನಿವೃತ್ತ ಸೈನಿಕರು ಸಾಬೀತುಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.  
ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ನಿವೃತ್ತ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿದ್ದು. ಕೇಂದ್ರ ಸರಕಾರ ಮನಸ್ಸಿಲ್ಲದ ಮನಸ್ಸಿನಲ್ಲಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದ್ದರು.
SCROLL FOR NEXT