ನವದೆಹಲಿ: ಹಿಂದುತ್ವ ಸಂಘಟನೆ ವಿಶ್ವ ಹಿಂದು ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸಿಂಘಾಲ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
"ಬಡವರಿಗೆ ಸಹಾಯವಾಗುವ ಹಲವಾರು ಕಾರ್ಯಕ್ರಮಗಳು ಮತ್ತು ಸಮಾಜ ಕಾರ್ಯಕ್ಕೆ ಅಶೋಕ್ ಸಿಂಘಾಲ್ ನೆರವಾಗಿದ್ದರು. ಹಲವು ಪೀಳಿಗೆಗಳಿಗೆ ಅವರು ಸ್ಫೂರ್ತಿ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.