ಪ್ರಧಾನ ಸುದ್ದಿ

ನವಜೋತ್ ಸಿಂಗ್ ಸಿದ್ಧು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Guruprasad Narayana

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಮುಖಂಡ ನವಜೋತ್ ಸಿಂಗ್ ಸಿದ್ಧು ಅವರು ಅಸ್ವಸ್ಥರಾಗಿದ್ದು ಮಂಗಳವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಕ್ತನಾಳದಲ್ಲಿ 'ಕ್ಲಾಟ್' ಇರುವುದಾಗಿ ತಿಳಿದುಬಂದಿದ್ದು, ದೆಹಲಿಯ ಅಪೋಲೊ ಆಸ್ಪತ್ರೆಗೆ ಕ್ರಿಕೆಟಿಗ-ರಾಜಕಾರಿಣಿ ಸಿದ್ಧು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ತಮ್ಮ ಟ್ವಿಟ್ಟರ್ ಕಾತೆಯಲ್ಲಿ ಅವರೇ ಫೋಟೊ ಒಂದನ್ನು ಹಾಕಿಕೊಂಡಿದ್ದು, ಜೀವಕ್ಕ ಅಪಾಯವಿರುವ ರೋಗದಿಂದ ನರಳುತ್ತಿದ್ದೇನೆ, ಆದರೆ ದೇವರ ದಯೆಯಿಂದ ಗುಣಮುಖನಾಗಿ ಹಿಂದಿರುಗುತ್ತೇನೆ ಎಂದು ತಿಳಿಸಿದ್ದಾರೆ.

SCROLL FOR NEXT