ಇಸ್ಲಾಮಾಬಾದ್: ತಾವೇ ಬಾಟಲಿಯಿಂದ ಹೊರಬಿಟ್ಟ 'ಹಿಂದುತ್ವದ ಭೂತ'ವನ್ನು ಬಾರತದ ಪ್ರಧಾನಿ ನರೇಂದ್ರ ಮೋದಿಯವರಿಗಷ್ಟೆ ಮತ್ತೆ ಬಾಟಲಿಗೆ ವಾಪಸ್ ಹಾಕಲು ಸಾಧ್ಯ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಹೇಳಿದ್ದಾರೆ.
ಮುಂಬೈನಲ್ಲಿ ಕಸೂರಿ ಅವರ ಪುಸ್ತಕ ಬಿಡುಗಡೆಗೆ ಕಳೆದ ವಾರವಷ್ಟೇ ಶಿವಸೈನಿಕರು ಅಡ್ಡಿಪಡಿಸಿದ್ದರು.
"ಇಡಿ ಭಾರತ ಮತ್ತು ನೆರೆ ಹೊರೆಯ ದೇಶಗಳು ಹಿಂದೂಗಳ ರಾಷ್ಟ್ರಗಳಾಗಿದ್ದವು ಎಂಬ ನಂಬಿಕೆಯಿಂದ ಈ ಭಲಪಂಥೀಯ ವಾದ 'ಹಿಂದುತ್ವ' ಹುಟ್ಟಿದೆ" ಎಂದು ಕಸೂರಿ ಸೋಮವಾರ ಹೇಳಿದ್ದಾರೆ.
ಶಿವಸೇನೆ ಕಾರ್ಯಕರ್ತರು ನೆನ್ನೆ ಮುಂಬೈನಲ್ಲಿ ಬಿಸಿಸಿಐ ಮತ್ತು ಪಿಸಿಬಿ ನಡುವೆ ಕ್ರಿಕೆಟ್ ಮಾತುಕತೆಗೆ ಅಡ್ಡಿಪಡಿಸಿದ ಹಿನ್ನಲೆಯಲಿ ಕಸೂರಿ ಈ ಹೇಳಿಕೆ ನೀಡಿದ್ದಾರೆ.