ವಿಚಾರವಾದಿಗಳ ಮೇಲಿನ ಹಲ್ಲೆ ವಿರೋಧಿಸಿ ಪ್ರತಿಭಟನೆ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಯುವ ಲೇಖಕ ಉಚ್ಚಂಗಿ ಮೇಲೆ ಹಲ್ಲೆ

ವಿಚಾರವಾದಿ ಸಾಹಿತಿ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿ ಮೇಲೆ ಹಲ್ಲೆಯಾಗಿದೆ...

ದಾವಣಗೆರೆ: ವಿಚಾರವಾದಿ ಸಾಹಿತಿ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿ ಮೇಲೆ ಹಲ್ಲೆಯಾಗಿದೆ.

ದಾವಣಗೆರೆಯ ಯುವ ಲೇಖಕ, ವಿದ್ಯಾರ್ಥಿ ಹೋರಾಟಗಾರ ಉಚ್ಚಂಗಿ ಪ್ರಸಾದ್ ಮೇಲೆ ಬುಧವಾರ ತಡರಾತ್ರಿ ಗುಂಪೊಂದು ಚಾಕುವಿನಿಂದ ಇರಿದಿದೆ. ಮಾ.22 ರಂದು ತಮ್ಮ `ಒಡಲ ಕಿಚ್ಚು'  ಕೃತಿಯನ್ನು ಕೆ.ಎಸ್.ಭಗವಾನ್‍ರಿಂದ ಬಿಡುಗಡೆಗೊಳಿಸಿದ್ದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಇದೇ ವೇಳೆ ಉಚ್ಚಂಗಿ ಪ್ರಸಾದ್ ಮೇಲಿನ ಹಲ್ಲೆಯನ್ನು `ದಿ ಇಂಡಿಯನ್ ರೈಟರ್ಸ್ ವೇದಿಕೆ' ಖಂಡಿಸಿದೆ. ಈ ವೇದಿಕೆಯಲ್ಲಿ ನಯನತಾರಾ ಸೆಹಗಲ್, ಕೆ. ಸಚ್ಚಿದಾನಂದನ್ ಮತ್ತು ರೋಮಿಲಾ ಥಾಪರ್ ಮುಂತಾದ ಹಿರಿಯ ಬರಹಗಾರರಿದ್ದಾರೆ. ಜಾತಿ ವ್ಯವಸ್ಥೆಯ  ಬಗೆಗೆ  ಧ್ವನಿ ಎತ್ತಿದ ಯುವ ದಲಿತ ಕವಿ ಉಚ್ಚಂಗಿ ಪ್ರಸಾದ್ ಮೇಲೆ ನಡೆಸಲಾದ ಹಲ್ಲೆಯನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಭಿನ್ನಾಭಿಪ್ರಾಯವನ್ನು ಹೀಗೆ ಹಲ್ಲೆಯ ಮೂಲಕ ವ್ಯಕ್ತಪಡಿಸುವುದೇ ಸರಿಯಾದರೆ ಭಾರತವನ್ನು ಒಂದು ಪ್ರಜಾಪ್ರಭುತ್ವ ಎಂದು ಕರೆಯಲು ಹೇಗೆ ಸಾಧ್ಯ ಎಂದು ವೇದಿಕೆ ಪ್ರಶ್ನಿಸಿದೆ. ಇತ್ತೀಚಿನ  ಲೇಖಕರ ಪ್ರತಿಭಟನೆಗಳು ಮತ್ತು ಈ ವೇದಿಕೆಯ ರಚನೆಯು ಇಂಥ ವಿಭಿನ್ನ ಬಗೆಯ, ಯಾವುದೇ ಭಾಷೆಯ ಲೇಖಕರ ಧ್ವನಿಯನ್ನು ಹತ್ತಿಕ್ಕುವ ಎಲ್ಲ ಬಗೆಯ ಪ್ರಯತ್ನಗಳನ್ನು ವಿರೋಧಿಸಲು  ಸೃಷ್ಟಿಯಾಗಿದೆ ಎಂದು ವಿವರಿಸಿದೆ. ಹಲ್ಲೆಯ ನಂತರವೂ, ಬರೆಯುವ ಪ್ರಕ್ರಿಯೆಯನ್ನು ಬಿಡುವುದಿಲ್ಲ ಎಂಬ ಪ್ರಸಾದ್ ನಿರ್ಧಾರವನ್ನು ಅದು ಶ್ಲಾಘಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 469ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ರಕ್ಷಾ ಬಂಧನದ ಇತಿಹಾಸ ಏನು? ಸಹೋದರರಿಗೆ ರಾಖಿ ಕಟ್ಟುವುದರ ಮಹತ್ವ ತಿಳಿದುಕೊಳ್ಳಿ!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು