ಆರೋಪಿಗಳಾದ ಮಧು, ಹರೀಶ್ ಬಾಬು 
ಪ್ರಧಾನ ಸುದ್ದಿ

ಜಗದೀಶ್ ಹತ್ಯೆ ಪ್ರಕರಣ: ಆರೋಪಿಗಳಿಗೆ ನೆರವು ನೀಡಿದ್ದ ಹನುಮಂತರಾಮು ಬಂಧನ

ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಮತ್ತೊಬ್ಬ...

ಬೆಂಗಳೂರು: ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಜಗದೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬುಗೆ ಸಹಾಯ ಮಾಡುತ್ತಿದ್ದ ಹನುಮಂತರಾಮುನನ್ನು ಪೊಲೀಸರು ಇಂದು ಕರ್ನೂಲ್ ನಲ್ಲಿ ಬಂಧಿಸಿದ್ದು, ಆತನಿಂದ ಜಗದೀಶ್ ಅವರ ಪಿಸ್ತೂಲ್, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಾದ ಮಧು ಹಾಗೂ ಹರೀಶ್  ಬಾಬು ಹೇಳಿಕೆ ಆಧರಿಸಿ ಆಂಧ್ರಪ್ರದೇಶದ ಕರ್ನೂಲಿಗೆ ತೆರಳಿದ್ದ ಪೊಲೀಸರು, ಇಂದು  ಚಿನ್ನಾಭರಣ ವ್ಯಾಪಾರಿ ಹನುಮಂತರಾಮು ಎಂಬಾತನ ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 16ರಂದು ಜಗದೀಶ್ ರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಮಹಾರಾಷ್ಟ್ರ ಕ್ರೈಂ ಬ್ರಾಂಚ್ ಪೊಲೀಸರು ನಾಗಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಕಸ್ತೂರಿರಂಗನ್ ವರದಿ ವಿರುದ್ಧ ರೈತರ ರಣಕಹಳೆ: 10 ಕಿ.ಮೀ. ನಡೆದು ಬಂದ ಸಾವಿರಾರು ಅನ್ನದಾತರು, ಸಿಎಂ ಭೇಟಿಗೆ ಪಟ್ಟು: ಬಿಸಿಲಲ್ಲೇ ಕುಳಿತು ಧರಣಿ..!