ರೈತ ಹೋರಾಟಕ್ಕೆ ಸುದೀಪ್ ಬೆಂಬಲ 
ಪ್ರಧಾನ ಸುದ್ದಿ

ಹೋರಾಟಕ್ಕೆ ನಟ ಸುದೀಪ್ ಬೆಂಬಲ

ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ಚಲನಚಿತ್ರ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರಲ್ಲಿ ಇನ್ನಷ್ಟು ಕೆಚ್ಚು ತುಂಬಿತು...

ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ಚಲನಚಿತ್ರ ನಟ ಕಿಚ್ಚ ಸುದೀಪ್ ಬೆಂಬಲ  ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರಲ್ಲಿ ಇನ್ನಷ್ಟು ಕೆಚ್ಚು ತುಂಬಿತು.

ಬೆಂಗಳೂರಿನಿಂದ ನೇರವಾಗಿ ಗದಗ ಜಿಲ್ಲೆ ನರಗುಂದದಕ್ಕೆ ಆಗಮಿಸಿದ್ದ ಸುದೀಪ್, ರೈತರನ್ನು ಹುರಿದುಂಬಿಸಿದರು. ಮಹದಾಯಿ ನೀರು ಕಾವೇರಿಯಷ್ಟೆ ಪ್ರಮುಖವಾಗಿದ್ದು, ಈ ನೀರಿನ ಹಕ್ಕು  ಪಡೆಯಲು ರೈತರೊಂದಿಗೆ ತಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದಾಗ ನೆರೆದಿದ್ದ ಅಪಾರ ಸಂಖ್ಯೆಯ ಯುವ ರೈತರ ಕೇಕೆ ಮುಗಿಲು ಮುಟ್ಟಿತು. ನಟ ಸುದೀಪ್ ಹೋರಾಟದ  ವೇದಿಕೆಗೆ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಅರಿತು ಹಳ್ಳಿ ಪಟ್ಟಣಗಳಿಂದ ಚಕ್ಕಡಿ, ಟ್ರ್ಯಾಕ್ಟರ್‍ಗಳಲ್ಲಿ ಅಪಾರ ಸಂಖ್ಯೆಯ ರೈತರು ನರಗುಂದಕ್ಕೆ ಆಗಮಿಸಿದ್ದರು. ಹೋರಾಟ ನಿರತ ರೈತರಲ್ಲಿ ಸುದೀಪ್  ಬೆಂಬಲ ಸಂಚಲನ ಮೂಡಿಸಿತು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಗ್ರಾಮದ ರೈತರು ನರಗುಂದ ದಲ್ಲಿ ಗುರುವಾರ ಹುಬ್ಬಳ್ಳಿಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು  ಪ್ರತಿಭಟಿಸಿದರು.

ಅಲ್ಲಿನ ಕೋರ್ಟ್ ವೃತ್ತದಲ್ಲಿ ಹೆದ್ದಾರಿ ತಡೆದು ಒಣಗಿದ ಗೋವಿನ ಜೋಳ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತ ಸೇನಾ ಸಂಘಟನೆ ನಡೆಸುತ್ತಿರುವ ಹೋರಾಟದಲ್ಲಿ  ಭಾಗವಹಿಸಿದರು. ನವಲಗುಂದದಲ್ಲೂ ಬಂದ್ ಮುಂದುವರೆದಿತ್ತು. ಗದಗ ಮತ್ತಿತರೆಡೆ ಪ್ರತಿಭಟನಾ ಮೆರವಣಿಗೆಗೂ ನಡೆದವು.

ಸಂಸದರ ಮನೆ ಎದುರು ಭಜನೆ
ತಮ್ಮನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಧಾರ ವಾಡ ಜಿಲ್ಲೆಯ ಸಾವಿರಾರು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಮನೆಯ ಎದುರು ಸಾಮೂಹಿಕ ಭಜನೆ ನಡೆಸಿ ಕ್ಷಮೆಗೆ ಆಗ್ರಹಿಸಿದರು. ಕ್ಷಮೆ ಕೋರುವಂತೆ ಗಡುವು ನೀಡಿದ್ದ ರೈತರು ಆ ಗಡುವಿನ ಒಳಗಾಗಿ ಸಂಸದ ಜೋಷಿ ಕ್ಷಮೆ ಕೋರದಿರುವ ಹಿನ್ನೆಲೆಯಲ್ಲಿ ಇಂದು ಭಜನೆ ಆರಂಭಿಸಿದ್ದಾರೆ. ರೈತರು ಅಪಾರ  ಸಂಖ್ಯೆಯಲ್ಲಿ ಆಗಮಿಸುವ ಸುದ್ದಿ ತಿಳಿದ ಪೊಲೀಸರು ಜೋಷಿ ಮನೆಗೆ ಭದ್ರ ಕಾವಲು ಹಾಕಿದ್ದರು ಮತ್ತು ರೈತರನ್ನು ಆಣತಿ ದೂರದಲ್ಲೇ ತಡೆದು ನಿಲ್ಲಿಸಿದರು. ಆದರೆ, ಪಟ್ಟುಬಿಡದ ರೈತರು ಕ್ಷಮೆ  ಯಾಚಿಸುವವರೆಗೆ ಜೋಶಿ ಸವರ ಮನೆ ಎದುರು ಭಜನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳದಲ್ಲಿ ಗುರುವಾರವೂ ಪ್ರತಿಭಟನೆ ಮುಂದುವರೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT