ಪ್ರಧಾನ ಸುದ್ದಿ

ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರಕಟ

Srinivasamurthy VN

ಬೆಂಗಳೂರು: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2015 ನೇ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹರಾದ 20 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 11 ಪ್ರೌಢಶಾಲಾ ಶಿಕ್ಷಕರ ಹೆಸರನ್ನು ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಸಲ್ಲಿಸಲಾಗಿತ್ತು.  ಪ್ರಾಥಮಿಕ ಶಾಲಾ ಮಟ್ಟ ದಲ್ಲಿ ಬೆಂಗಳೂರು ವಿಭಾಗದ 6, ಮೈಸೂರು ವಿಭಾಗದ 5, ಬೆಳಗಾವಿ ವಿಭಾಗದ 5 ಹಾಗೂ ಕಲಬುರಗಿ ವಿಭಾಗದ 4 ಮಂದಿ ಶಿಕ್ಷಕರು, ಪ್ರೌಢಶಾಲಾ ಮಟ್ಟದಲ್ಲಿ  ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗದ ತಲಾ 3, ಕಲಬುರಗಿ ವಿಭಾಗದ ಇಬ್ಬರಿಗೆ ಪ್ರಶಸಿ ಸಿಕ್ಕಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಸ್. ಹೊನ್ನೇಗೌಡ ತಿಳಿಸಿದ್ದಾರೆ.

ಶಿಕ್ಷಕರ ವಿವರ ಇಂತಿದೆ
ಪ್ರಾಥಮಿಕ ಶಾಲೆ:
ಬೆಂಗಳೂರು ವಿಭಾಗ ಎಚ್.ಸಿ. ಕುಮಾರ (ತೀರ್ಥಹಳ್ಳಿ ತಾ.), ಹನುಮಂತಪ್ಪ ಮುದ್ದೇರ್ (ಹರಿಹರ ತಾಲೂಕು), ಎಂ ದೇವರಾಜ್ (ಶಿಡ್ಲಘಟ್ಟ ತಾ.), ಕೆ. ನಾಗರಾಜು  (ಗರಗದಗುಪ್ಪೆ), ಕೆ. ಹನುಮಂತಪ್ಪ (ಹೊಸದುರ್ಗ ತಾ.), ರಮಾದೇವಿ (ಬೆಂಗಳೂರು ಉತ್ತರ ವಲಯ), ಮೈಸೂರು ವಿಭಾಗ ಹೆಲನ್‍ವೆಲ್ ಸಿಲೀಯ (ಮೈಸೂರು ಉತ್ತರ ವಲಯ), ಯು. ದೇವಪ್ಪ   ಯ್ಕ (ಬಂಟ್ವಾಳ ತಾ.), ವೆಂಕಟಕೃಷ್ಣರಾವ್ (ಕಾರ್ಕಳ ತಾ.), ಎಚ್.ಎನ್. ರಾಗಿಣಿ (ಸೋಮವಾರಪೇಟೆ ತಾ.), ಪಿ. ವಾಸಪ್ಪ (ಕಡೂರು ತಾ.), ಬೆಳಗಾವಿ ವಿಭಾಗ ಭುಜಬಲ್ಲಿ ಧನಪಾಲ ನೇಮಗೌಡ  (ಜಮಖಂಡಿ ತಾ.), ಗಂಗಾಧರ ಶಿವಪ್ಪ ಹುಬ್ಬಳ್ಳಿ (ಹುಬ್ಬಳ್ಳಿ ತಾ.), ವಿನಾಯಕ ತಿಮ್ಮಪ್ಪ ಹೆಗಡೆ (ಸಿದ್ದಾಪುರ ತಾ.), ದತ್ತಾತ್ರೇಯ ಗಣಪತಿ ಪಂಡಿತ (ಕುಮಟ ತಾಲ್ಲೂಕು),ಸಿಕೆ ಕೇಸರಿ (ರೋಣ  ತಾ.)ಕಲಬುರಗಿ ವಿಭಾಗ-ದೇವೇಂದ್ರಪ್ಪ ಬಸವರಾಜಪ್ಪ ಅಂಗಡಿ (ಶಹಾಪುರ ತಾ.), ವೀರಸಂಗಪ್ಪ ಎ. ಸುಲೇಗಾಂವ (ಚಿತ್ತಾಪುರ ತಾ.), ಚಂದ್ರಶೇಖರ (ಕೊಪ್ಪಳ ತಾ.), ಅನ್ನಪೂರ್ಣ (ಬೀದರ್ .).

ಪ್ರೌಢಶಾಲೆ: ಬೆಂಗಳೂರು ವಿಭಾಗ ಎನ್. ಓಂಕಾರ್ ನಾಯ್ಕ (ಬೆಂಗಳೂರು ಉತ್ತರ ವಲಯ), ಇ. ಶ್ರೀನಿವಾಸಗೌಡ (ಮುಳಬಾಗಿಲು ತಾ.) ಎಂ.ಗೋಪಾಲ ಕೃಷ್ಣಯ್ಯ (ದೊಡ್ಡಬಳ್ಳಾಪುರ ತಾ.),   ಸೂರು ವಿಭಾಗ ಕೆ. ಪುರಂದರನಾರಾಯಣ ಭಟ್ (ಸುಳ್ಯ ತಾಲ್ಲೂಕು), ಎಂ.ಪ್ರಕಾಶ್ (ಕಡೂರು ತಾ.), ವೈ .ಪಿ. ಜಲಜಾಕ್ಷಿ (ಸೋಮವಾರಪೇಟೆ ತಾ.), ಬೆಳಗಾವಿ ವಿಭಾಗ ಈರಪ್ಪ ಭೀಮಪ್ಪ  ಬೆಟಗೇರಿ (ಬೆಳಗಾವಿ ತಾ.), ಎಸ್.ಎಂ. ಜುಮ್ಮಣ್ಣ ನವರ (ಬಾದಾಮಿ ತಾ.), ಶಿವಪ್ಪ ಫಕೀರಪ್ಪ ಬೆನಕಣ್ಣನವರ (ಗದಗ ತಾ.), ಕಲಬುರಗಿ ವಿಭಾಗ ಶ್ರೀಕಾಂತ ಬಿ. ಬಿರಾದಾರ (ಬೀದರ್ ತಾ.),  ಎಂ.ಎಂ. ಮಳಖೇಡ (ಯಾದಗಿರಿ ತಾ.)

SCROLL FOR NEXT