ಪುತ್ತೂರು: ಉಭಯ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರ ಪಡೆದ ಎತ್ತಿನಹೊಳೆ ಯೋಜನೆ ಸ್ಥಗಿತಕ್ಕೆ ಕೇಂದ್ರ ಸರ್ಕಾರದ ಮಧ್ಯಪ್ರವೇಶವೊಂದೇ ಉಳಿದಿರುವ ದಾರಿ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಸುದ್ದಿಗಾರರೊಂದಿಗ ಮಾತನಾಡಿ, ದಕ್ಷಿಣ ಕನ್ನಡದವರೇ ಆಗಿರುವ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸದನದಲ್ಲಿ ಯೋಜನೆಗೆ ಅಂಗೀಕಾರ ಪಡೆಯಲಾಗಿತ್ತು. ಸದ್ಯ ಕಾಮಗಾರಿ ಪ್ರಾರಂಭವಾಗಿರುವುದರಿಂದ ರಾಜ್ಯ ಸರ್ಕಾರ ಏನೂ ಮಾಡುವಂತಿಲ್ಲ. ಅಂದೇ ತಡೆಯುವ ಪ್ರಯತ್ನ ನಡೆಯಬೇಕಿತ್ತು. ಸದ್ಯ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯ ಸರ್ಕಾರ ಅಥವಾ ಉಭಯ ಸದನಗಳು ತೆಗೆದು ಕೊಂಡ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕಾದ ಅನಿವಾರ್ಯತೆ ಇದೆ. ಕರಾವಳಿ ಜನರ ಸಮಸ್ಯೆ ಪರಿಗಣಿಸಿ, ಅಹವಾಲು ಸ್ವೀಕಾರಕ್ಕೆ ಚಿಂತಿಸಲಾಗುವುದು ಎಂದರು.