ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುಂಡಿನಿಂದ ಹತರಾದ ಮೂರು ಯುವಕರ ದೇಹ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹದ ಮೇಲೆ ಹಿಂಸೆಯ ಗುರುತುಗಳು ಹಾಕು ಬುಲೆಟ್ ಹೊಡೆದಿರುವುದು ಕಂಡುಬಂದಿದೆ ಎಂದು ಗಾಬರಿಗೊಂಡಿರುವ ನಿವಾಸಿಗಳು ತಿಳಿಸಿದ್ದಾರೆ.
"ಬಾರಮುಲ್ಲ ಜಿಲ್ಲೆಯ ಚೋರೂರ್ ಗ್ರಾಮದ ಸೇಬಿನ ತೋಟದಲ್ಲಿ ಮೂರು ಯುವಕರ ದೇಹ ಪತ್ತೆಯಾಗಿದೆ. ಅವರ ವಯಸ್ಸು ೧೭ ರಿಂದ ೨೧" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯಾರನ್ನೂ ಗುರುತಿಸಲಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಈ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.