ಪ್ರಧಾನ ಸುದ್ದಿ

ಕೊಲ್ಲಂ ಪಟಾಕಿ ಅವಘಡವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿ: ಚಾಂಡಿ

Lingaraj Badiger
ತಿರುವನಂತಪುರಂ: ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಿ ದೇವಾಲಯದಲ್ಲಿ ಸಂಭವಿಸಿದ ಪಟಾಕಿ ಅವಘಡವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸುವಂತೆ ಕೇರಳ ಸರ್ಕಾರ ಬುಧವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು, ಅಗ್ನಿ ಅವಘಡವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ದೇವಾಲಯದ ವಾರ್ಷಿಕೋತ್ಸವ ಸಮಾರಂಭದ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮ ಅಗ್ನಿ ದುರಂತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವ ಕುರಿತು ಚರ್ಚಿಸಲು ಏಪ್ರಿಲ್ 14 ರಂದು ಸರ್ವಪಕ್ಷ ಸಭೆ ಕರೆದಿರುವುದಾಗಿ ಉಮ್ಮನ್ ಚಾಂಡಿ ತಿಳಿಸಿದ್ದಾರೆ.
ಕೇರಳ ಹೈಕೋರ್ಟ್ ಈಗಾಗಲೇ ರಾತ್ರಿ ವೇಳೆ ದೇವಾಲಯದಲ್ಲಿ ಪಟಾಕಿ ಪ್ರದರ್ಶನಗಳನ್ನು ನಿಷೇಧಿಸಿದೆ.
SCROLL FOR NEXT