ಮಾಹೌನಲ್ಲಿ ಅಂಬೇಡ್ಕರ್ ಸ್ಮಾರಕ ಭವನ 
ಪ್ರಧಾನ ಸುದ್ದಿ

ಅಂಬೇಡ್ಕರ್ ಹುಟ್ಟೂರಿನಿಂದ ಗ್ರಾಮ ಸಬಲೀಕರಣ ಅಭಿಯಾನಕ್ಕೆ ಮೋದಿ ಚಾಲನೆ

ಡಾ| ಭೀಮರಾವ್ ಅಂಬೇಡ್ಕರ್ ಅವರ ೧೨೫ನೇ ಜಯಂತಿಯ ದಿನದಂದು ಗೌರವ ಸಲ್ಲಿಸಲು ಮಾಹೌಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, 'ಗ್ರಾಮ ಉದಯದಿಂದ ಭಾರತದ

ಇಂದೋರ್: ಡಾ| ಭೀಮರಾವ್ ಅಂಬೇಡ್ಕರ್ ಅವರ ೧೨೫ನೇ ಜಯಂತಿಯ ದಿನದಂದು ಗೌರವ ಸಲ್ಲಿಸಲು ಮಾಹೌಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, 'ಗ್ರಾಮ ಉದಯದಿಂದ ಭಾರತದ ಉದಯ' ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಸುಮಾರು ೧೨:೫೫ ಕ್ಕೆ ಇಂದೋರ್ ನಗರದಲ್ಲಿ ಮೋದಿ ಇಳಿಯಲಿದ್ದು ಅಲ್ಲಿಂದ ಮಾಹೌಗೆ ತೆರಳಲಿದ್ದಾರೆ. ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಅವರು ಗೌರವ ಸಲ್ಲಿಸಲಿದ್ದು ನಂತರ ಕಾರ್ಯಕ್ರಮವೊಂದರಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಾಹೌ ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜನಿಸಿದ್ದರು.

ಅಂಬೇಡ್ಕರ್ ಜಯಂತಿ ೧೪ ನೇ ಏಪ್ರಿಲ್ ನಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ೨೪ ನೇ ಏಪ್ರಿಲ್ ವರೆಗೆ ಸರ್ಕಾರದ ಅಭಿಯಾನ 'ಗ್ರಾಮ ಉದಯದಿಂದ ಭಾರತದ ಉದಯ' ಜಾರಿಯಲ್ಲಿರಲಿದೆ ಎಂದು ತಿಳಿದುಬಂದಿದೆ.

ಈ ಅಭಿಯಾನ ಪಂಚಾಯತ್ ರಾಜ್ ಅನ್ನು ಬಲಿಷ್ಠಗೊಳಿಸಾಲು ಹಾಗೂ ಗ್ರಾಮಗಳಲ್ಲಿ ಸಾಮಾಜಿಕ ಸೌಹಾರ್ದ ಮತ್ತು ಅಭಿವೃದ್ಧಿಗೆ ಸಹಕರಿಸಲಿದೆ ಎನ್ನಲಾಗಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT