ಪ್ರಧಾನ ಸುದ್ದಿ

ಎಐಡಿಎಂಕೆ ವಿರುದ್ಧ ದೂರುಗಳ ಬಗ್ಗೆ ಚುನಾವಣಾ ಆಯೋಗ ಮೌನವಾಗಿದೆ: ಬಿಜೆಪಿ ಸಚಿವ

Guruprasad Narayana

ಮಧುರೈ: ಆಡಳಿತ ಪಕ್ಷ ಎಐಡಿಎಂಕೆ ವಿರುದ್ಧದ ದೂರುಗಳ ಬಗ್ಗೆ ಚುನಾವಣಾ ಆಯೋಗ ಮೌನ ತಳೆದಿದೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಪೊನ್ ರಾಧಾಕೃಷ್ಣನ್ ಇಂದು ಆರೋಪಿಸಿದ್ದಾರೆ.

"ಚುನಾವಣಾ ಆಯೋಗದ ಕೆಲಸದ ಮಾದರಿ, ಆಡಳಿತ ಪಕ್ಷದ ಬಗೆಗೆ ಮೃದುವಾಗಿದೆ ಎಂಬ ಸಂದೇಹ ಹುಟ್ಟಿಸಿದೆ" ಎಂದು ಅವರು ವಿಮಾನ ನಿಲ್ದಾಣದಲ್ಲಿ ವರದಿಗಾರರಿಗೆ ಹೇಳಿದ್ದು ಅದನ್ನು ವಿಸ್ತಾರವಾಗಿ ಚರ್ಚಿಸುವ ಗೋಜಿಗೆ ಹೋಗಿಲ್ಲ.

ಮೀನುಗಾರರು ಮತ್ತು ಶ್ರೀಲಂಕಾದ ತಮಿಳರ ವಿಷಯವಾಗಿ ಮಾತನಾಡಿರುವ ಅವರು ಈ ಮುದ್ದೆಗಳ ಬಗ್ಗೆ ರಾಜಕೀಯ ಪಕ್ಷಗಳು ಕೇವಲ ಚುನಾವಣೆಯ ಸಮಯದಲ್ಲಿ ಮಾತನಾಡುತ್ತವೆ ಎಂದು ಕೂಡ ಅವರು ಹೇಳಿದ್ದಾರೆ.

ಮತ್ತೊಂದೆಡೆ "ಶ್ರೀಲಂಕಾ ತಮಿಳರು ಮತ್ತು ಮೀನುಗಾರರ ಹಿತಾಸಕ್ತಿಗೆ ನರೇಂದ್ರ ಮೋದಿ ಹಲವಾರು ಕ್ರಮ ತೆಗೆದುಕೊಂಡಿದ್ದಾರೆ" ಎಂದಿರುವ ಅವರು "ತಮಿಳುನಾಡಿಗೆ ಪ್ರಚಾರಕ್ಕಾಗಿ ಪ್ರಧಾನಿ ಬರಲಿದ್ದಾರೆ" ಎಂದು ಕೂಡ ತಿಳಿಸಿದ್ದಾರೆ.

"ಡಿ ಎಂ ಕೆ ಅಥವಾ ಎಐಡಿಎಂಕೆ ಅಧಿಕಾರಕ್ಕೆ ಬರಲೆಂದೇ ಎಂ ಡಿ ಎಂ ಕೆ ಅಧ್ಯಕ್ಷ ವೈಕೋ ಪೀಪಲ್ಸ್ ವೆಲ್ಫೇರ್ ಫ್ರಂಟ್ ಸ್ಥಾಪಿಸಿದ್ದಾರೆ" ಎಂದು ಕೂಡ ಅವರು ಹೇಳಿದ್ದಾರೆ.

SCROLL FOR NEXT