ಪ್ರಧಾನ ಸುದ್ದಿ

ಉತ್ತರಾಖಂಡ್ ಹೈಕೋರ್ಟ್ ನಿರ್ಧಾರ; ಅಟಾರ್ನಿ ಜನರಲ್ ವಿರುದ್ಧ ಕಿಡಿ ಕಾರಿದ ಸ್ವಾಮಿ

Guruprasad Narayana

ನವದೆಹಲಿ: ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿ, ಕೇಂದ್ರಕ್ಕೆ ಛೀಮಾರಿ ಹಾಕಿ ಬಹುಮತ ಸಾಬಿತ ಪಡಿಸಲು ಉತ್ತರಾಖಾಂಡ್ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಗುರುವಾರ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.

"ಭಾರಜೀಯ ಜನತಾ ಪಕ್ಷದ ಸರ್ಕಾರಕ್ಕೆ ನೂತನ ಅಟಾರ್ನಿ ಜನರಲ್ (ಎ ಜಿ) ಮತ್ತು ಸಾಲಿಸಿಟರ್ ಜನರಲ್ (ಎಸ್ ಜಿ) ನೇಮಿಸುವ ಸಮಯ ಬಂದಿದೆ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

"ನೂತನ ಎ ಜಿ ಮತ್ತು ಎಸ್ ಜಿ ನೇಮಿಸಿದರೆ ನಾವು ಉತ್ತರಾಖಾಂಡ್ ಪ್ರಕರಣವನ್ನು ಗೆಲ್ಲಬಹುದು. ಅರುಣಾಚಲದಲ್ಲಿ ಇವರಿಬ್ಬರನ್ನು ಹೊರಗಿಟ್ಟು ನಮ್ಮ ಪ್ರಕರಣವನ್ನು ಗೆದ್ದಿದ್ದೆವು" ಎಂದು ಕೂಡ ಸ್ವಾಮಿ ಟ್ವೀಟ್ ಮಾಡಿದ್ದಾರೆ.

SCROLL FOR NEXT