ಮದ್ಯ ದೊರೆ ಹಾಲಿ ಸುಸ್ತಿದಾರ ವಿಜಯ್ ಮಲ್ಯ 
ಪ್ರಧಾನ ಸುದ್ದಿ

ರಾಜ್ಯಸಭೆ ವೇತನ ಮತ್ತಿತರ ಸೌಲಭ್ಯಗಳನ್ನು ಜೇಬಿಗಿಳಿಸಿದ ಬಿಲಿಯನೇರ್ ಮಲ್ಯ

ಮದ್ಯ ದೊರೆ ಹಾಲಿ ಸುಸ್ತಿದಾರ ವಿಜಯ್ ಮಲ್ಯ ಬಿಲಿಯನೇರ್ ಆಗಿದ್ದಿರಬಹುದು ಆದರೆ ರಾಜ್ಯಸಭಾ ಸದಸ್ಯನಾಗಿ ಅಲ್ಲಿಂದ ಸಿಗುತ್ತಿದ್ದ ಯಾವುದೇ ಸೌಲಭ್ಯಗಳನ್ನು ಬಳಸಿಕೊಳ್ಳುವುದರಿಂದ ಹಿಂಜರಿದಿಲ್ಲ...

ಲಕನೌ: ಮದ್ಯ ದೊರೆ ಹಾಲಿ ಸುಸ್ತಿದಾರ ವಿಜಯ್ ಮಲ್ಯ ಬಿಲಿಯನೇರ್ ಆಗಿದ್ದಿರಬಹುದು ಆದರೆ ರಾಜ್ಯಸಭಾ ಸದಸ್ಯನಾಗಿ ಅಲ್ಲಿಂದ ಸಿಗುತ್ತಿದ್ದ ಯಾವುದೇ ಸೌಲಭ್ಯಗಳನ್ನು ಬಳಸಿಕೊಳ್ಳುವುದರಿಂದ ಹಿಂಜರಿದಿಲ್ಲ ಮತ್ತು ೨೦,೦೦೦ ರೂ ನಂತಹ ಸಣ್ಣ ಸೌಲಭ್ಯದ ಮೊತ್ತಗಳನ್ನೂ ಕೂಡ ಜೇಬಿಗಿಳಿಸಿದ್ದಾರೆ ಎಂದು ಆರ್ ಟಿ ಐ ಅರ್ಜಿಗೆ ಬಂದ ಪ್ರತಿಕ್ರಿಯೆ ಬಹಿರಂಗಗೊಳಿಸಿದೆ.

ಬರೇಲಿ ಮೂಲದ ಮೊಹಮದ್ ಖಾಲಿದ್ ಜೀಲಾನಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯಿದೆ ಅರ್ಜಿಯಡಿ ೯೦೦೦ ಕೋಟಿ ಸಾಲ ತೀರಿಸಲಾಗದೆ ಸದ್ಯಕ್ಕೆ ಸುಸ್ತಿದಾರನಾಗಿ, ಜಾಮೀನು ರಹಿತಿ ವಾರೆಂಟ್ ಪಡೆದು ಲಂಡನ್ ನಲ್ಲಿ ವಾಸಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ ಸಂಸದರಿಗೆ ಬರುವ ೫೦೦೦೦ ರೂ ವೇತನವನ್ನು ಪ್ರತಿ ತಿಂಗಳು ಪಡೆದಿರುವುದಲ್ಲದೆ, ತಮ್ಮ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಮತ್ತು ಫೋನ್ ಬಿಲ್ ಪಾವತಿ ಸೌಲಭ್ಯವನ್ನೂ ಬಳಸಿಕೊಂಡಿದ್ದಾರೆ ಎಂದು ರಾಜ್ಯ ಸಭಾ ಸೆಕ್ರೆಟೆರಿಯಟ್ ತಿಳಿಸಿದೆ.

"ರಾಜನಂತೆ ಐಶಾರಾಮಿ ಜೀವನ ನಡೆಸುತ್ತಿದ್ದ ಮಲ್ಯ ಇವುಗಳನ್ನೆಲ್ಲಾ ಉಪಯೋಗಿಸಿಕೊಂಡಿರುವುದನ್ನು ಕಂಡು ಆಘಾತವಾಯಿತು" ಎನ್ನುತ್ತಾರೆ ಆರ್ ಟಿ ಐ ಕಾರ್ಯಕರ್ತ ಜೀಲಾನಿ.

ವಿಮಾನ ಪ್ರಯಾಣ ಸಂಬಂಧವಾಗಿ ಮಲ್ಯ ಯಾವುದೇ ಪರಿಹಾರ ಪಡೆದಿಲ್ಲ ಎಂದು ಆರ್ ಟಿ ಐ ಪ್ರತಿಕ್ರಿಯೆ ತಿಳಿಸಿದ್ದರೂ ಇನ್ನೂ ಹಲವು ಅನುದಾನಗಳನ್ನು ಪಡೆದಿದ್ದಾರೆ.

ಜುಲೈ ೧ ೨೦೧೦ ಮತ್ತು ಸೆಪ್ಟಂಬರ್ ೨೦ ೨೦೧೦ ರ ನಡುವೆ ೬೧ ವರ್ಷದ ಮಲ್ಯ ರಾಜ್ಯಸಭೆಯ ಸಂಸದರಿಗೆ ಬರುವ ೫೦,೦೦೦ ರೂ ಪ್ರತಿ ತಿಂಗಳ ವೇತನವನ್ನು ಮತ್ತು ಪ್ರತಿ ತಿಂಗಳ ಕ್ಷೇತ್ರ ಅನುದಾನ ೨೦,೦೦೦ ರೂಗಳನ್ನು ತೆಗೆದುಕೊಂಡಿದ್ದರೆ. ಅಲ್ಲದೆ ಇದೇ ಅನುದಾನದಡಿ ನಂತರದ ತಿಂಗಳುಗಳಲ್ಲಿ ೪೫,೦೦೦ ರೂ ಪಡೆದಿದ್ದಾರೆ.

ಇದೇ ಸಮಯದಲ್ಲಿ ಕಚೇರಿ ಕರ್ಚುಗಳಿಗೆ ತಿಂಗಳಿಗೆ ೬೦೦೦ ರೂ ಪಡೆದಿರುವ ಮದ್ಯ ದೊರೆ, ನಂತರದ ತಿಂಗಳುಗಳಲ್ಲಿ ೧೫,೦೦೦ ರೂ ಪಡೆದಿದ್ದಾರೆ.

ತಮ್ಮ ಅಧಿಕೃತ ಫೋನ್ ಕರೆಗಳ ವೆಚ್ಚವಾಗಿ ೧.೭೩ ಲಕ್ಷ ರಶೀದಿಯನ್ನೂ ಕೂಡ ಮಲ್ಯ ನೀಡಿದ್ದಾರೆ. ರಾಜ್ಯಸಭಾ ಸಂಸದರಿಗೆ ಮೊದಲ ೫೦೦೦೦ ಕರೆಗಳು ಉಚಿತ.

ಆದರೆ ವಿದ್ಯುಚ್ಚಕ್ತಿ ಅಥವಾ ಆರೋಗ್ಯ ಸಂಬಂಧಿ ಯಾವುದೇ ಪರಿಹಾರವನ್ನು ಮಲ್ಯ ಪಡೆದಿಲ್ಲ.

೨೦೦೨ ರಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಮತ್ತು ಜೆ ಡಿ ಎಸ್ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು ಮತ್ತು ೨೦೧೦ರಲ್ಲಿ ಎರಡನೆ ಅವಧಿಗೆ ಬಿಜೆಪಿ ಮತ್ತು ಜೆ ಡಿ ಎಸ್ ಬೆಂಬಲದಿಂದ ಆಯ್ಕೆಯಾಗಿದ್ದು, ಅವರ ಅವಧಿ ಜುಲೈನಲ್ಲಿ ಪೂರ್ಣಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT