ಪ್ರಧಾನ ಸುದ್ದಿ

ಭಾರತದ ನ್ಯೂಕ್ಲಿಯರ್ ಸಬ್ ಮೆರೀನ್ ಪರೀಕ್ಷೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನ

Guruprasad Narayana

ಇಸ್ಲಾಮಾಬಾದ್: ಭಾರತ ಇತ್ತೀಚೆಗೆ ನಡೆಸಿದ ಸಬ್ ಮೇರಿನ್ ನಿಂದ ಜಿಗಿಯುವ ಬ್ಯಾಲ್ಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಮತ್ತು ಪರಮಾಣು ಸಬ್ ಮೆರೀನ್ ಅಭಿವೃದ್ಧಿಯ ಬಗ್ಗೆ ಪಾಕಿಸ್ತಾನ ಗಂಭೀರವಾದ ಕಳವಳ ವ್ಯಕ್ತಪಡಿಸಿದೆ.

ಈ ಭಾಗದಲ್ಲಿ ಸೂಕ್ಷ್ಮವಾಗಿರುವ ದೇಶಗಳ ನಡುವಿನ ಸಮತೋಲ ಸಂಬಂಧಕ್ಕೆ ಈ ಬೆಳವಣಿಗೆ ಗಂಭೀರವಾಗಿ ಧಕ್ಕೆ ತರಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

"ವರದಿಯಾಗಿರುವ ಭಾರತೀಯ ಪರೀಕ್ಷೆಗಳು ಹಿಂದೂ ಮಹಾಸಾಗರದಲ್ಲಿ ಪರಮಾಣು ಶಸ್ತ್ರಾಸ್ತ್ರೀಕರಣಗೊಳಿಸಿದೆ. ಇದು ಈ ಭಾಗಕ್ಕೆ ಹಾಗು ಅಂತರಾಷ್ಟ್ರೀಯ ಸಮುದಾಯಕ್ಕೆ ಕಳವಳಕಾರಿ ಬೆಳವಣಿಗೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಿಕ್ರಿಯಾ ಗುರುವಾರ ಹೇಳಿದ್ದಾರೆ.

"ಈ ಪರೀಕ್ಷೆಯ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸಲಾಗಿಲ್ಲ" ಎಂದು ಕೂಡ ಜಿಕ್ರಿಯಾ ಹೇಳಿದ್ದಾರೆ.

ನೆಲದಿಂದ ಜಿಗಿಯುವ ಅಥಾವಾ ಸಮುದ್ರ ತಳದಿಂದ ಜಿಗಿರುವ ಕ್ಷಿಪಣಿ ಪರೀಕ್ಷೆಯಾಗಲೀ, ಇದನ್ನು ಮತ್ತೊಂದು ದೇಶ ಆಕ್ರಮಣಕಾರಿ ಕ್ಷಿಪಣಿ ಎಂದು ತಪ್ಪಾಗಿ ತಿಳಿಯಬಹುದಾಗಿದೆ.

"ಆದುದರಿಂದ ಯಾವುದೇ ಬ್ಯಾಲ್ಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸುವಾಗ ಒಪ್ಪಂದಂತೆ ಪಾಕಿಸ್ತಾನಕ್ಕೆ ಮೊದಲೇ ಸೂಚಿಸುವ ಅಗತ್ಯ ಇತ್ತು" ಎಂದು ಕೂಡ ಅವರು ಹೇಳಿದ್ದಾರೆ.

SCROLL FOR NEXT