ಬೆಂಗಳೂರು: ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಮಂಗಳವಾರ ಮತ್ತೊಂದು ದೂರು ದಾಖಲಾಗಿದ್ದು, ಇದರೊಂದಿಗೆ ಸಿಎಂ ವಿರುದ್ಧ ಎಸಿಬಿಗೆ ಬಂದ ನಾಲ್ಕನೇ ದೂರು ಇದಾಗಿದೆ.
ರಾಚೇನಹಳ್ಳಿ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ಎಂಬುವರು ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತ ಶ್ಯಾಂ ಭಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಚೇನಹಳ್ಳಿ ಡಿನೋಟಿಫಿಕೇಷನ್ ವೇಳೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ನಟರಾಜ್ ಶರ್ಮಾ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಸಿಬಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ದುಬಾರಿ ವಾಚ್ ಪ್ರಕರಣ, ಪುತ್ರನ ಸ್ನೇಹಿತನ ಕಂಪನಿಗೆ ಹೆಬ್ವಾಳ ಬಳಿ ಭೂಮಿ ಮಂಜೂರು ಮಾಡಿದ ಪ್ರಕರಣ ಹಾಗೂ ಪುತ್ರ ಯತೀಂದ್ರಗೆ ವಿಕ್ಟೋರಿಯಾ ಆವರಣದಲ್ಲಿ ಲ್ಯಾಬ್ ಆರಂಭಕ್ಕೆ ಗುತ್ತಿಗೆ ನೀಡಿದ ಸಂಬಂಧ ಸಿಎಂ ವಿರುದ್ಧ ಎಸಿಬಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಇದೀಗ ನಾಲ್ಕನೇ ದೂರು ದಾಖಲಾಗಿದೆ.