ಕೋಲ್ಕತ್ತಾ: ಭಾರತೀಯ ವಾಯುಪಡೆಯ (ಐ ಎ ಎಫ್) ನ ಉನ್ನತ ತಂತ್ರಜ್ಞಾನದ ತರಬೇತಿ ಜೆಟ್ 'ಹಾಕ್', ವಾಯು ನೆಲೆಯಿಂದ ಮೇಲಕ್ಕೆ ಹಾರಿದಾಕ್ಷಣ ಪಶ್ಚಿಮ ಬಂಗಾಳದ ಮಿಂದಾಪುರ್ ಜಿಲ್ಲೆಯಲ್ಲಿ ಪತನಗೊಂಡಿದೆ.
ಆದರೆ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಜೆಟ್ ಸುಮಾರು ಬೆಳಗ್ಗೆ 11 ಘಂಟೆಗೆ ಕಲೈಕುಂಡ ನೆಲೆಯಿಂದ ಹಾರಿತ್ತು.
ಈ ಪತನದ ಬಗ್ಗೆ ತನಿಖೆ ನಡೆಸಲು ಐ ಎ ಎಫ್ ಆದೇಶಿಸಿದೆ.