ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವವರು ರಣಹೇಡಿಗಳು. ಹೀಗಾಗಿ ನಾನು ಒಬ್ಬ ದೇಶಭಕ್ತನಾಗಿ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಆತ್ಮಹತ್ಯೆಗೆ ಶರಣಾದವರ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮನ್ನು ತಾವು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಆಗಸ್ಟ್ 15 ರಂದು ಮಂಡ್ಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ, ದಿವಂಗತ ಡಿವೈಎಸ್'ಪಿಗಳಾದ ಕಲ್ಲಪ್ಪ ಹಂಡಿಭಾಗ್ ಹಾಗೂ ಗಣಪತಿಯವರ ಫೋಟೊಗಳನ್ನು ಇಟ್ಟುಕೊಂಡು ಮೈದಾನದಲ್ಲಿ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸಚಿವ ಡಿ.ಕೆ. ಶಿವಕುಮಾರ್ ನೃತ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರು.
ಈ ಬಗ್ಗೆ ಇಂದು ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಆತ್ಮಹತ್ಯೆಗೆ ಶರಣಾಗುವವರು ರಣಹೇಡಿಗಳು. ಹಾಗಾಗಿ ದೇಶಕ್ಕಾಗಿ ಹೋರಾಡಿದವರ ಫೋಟೊ ಪ್ರದರ್ಶಿಸಬೇಕೇ ಹೊರತು. ಇಂತವರ ಫೋಟೋ ಪ್ರದರ್ಶಿಸಬೇಡಿ ಎಂದು ನಾನೊಬ್ಬ ದೇಶಭಕ್ತನಾಗಿ ಅವರ ಫೋಟೋ ಪ್ರದರ್ಶನ ತಡೆದೆ ಎಂದು ಹೇಳಿದರು.
ನಾನೊಬ್ಬ ದೇಶಭಕ್ತನಾಗಿ, ಸಚಿವನಾಗಿ ಆತ್ಮಹತ್ಯೆಗೆ ಶರಣಾದವರ ಫೋಟೊ ಪ್ರದರ್ಶನ ಸರಿಯಲ್ಲ ಎಂದು ತಡೆದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.