ಪ್ರಧಾನ ಸುದ್ದಿ

ಮಾಜಿ ಇಂಜಿನಿಯರಿಂಗ್ ವಿದ್ಯಾರ್ಥಿ ಝಾಕೀರ್ ರಶೀದ್ ಭಟ್ ಮೃತ ಉಗ್ರ ವಾನಿ ಉತ್ತರಾಧಿಕಾರಿ?

Vishwanath S

ಜಮ್ಮು: ಯೋಧರ ಗುಂಡೇಟಿಗೆ ಬಲಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಗೆರಿಲ್ಲಾ ಪಡೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಮಾಜಿ ಇಂಜಿನಿಯರಿಂಗ್ ವಿದ್ಯಾರ್ಥಿ ಝಾಕೀರ್ ರಶೀದ್ ಭಟ್ ಉತ್ತರಾಧಿಕಾರಿಯಾಗಿದ್ದಾನೆ.

ವಿಡಿಯೋ ಒಂದರಲ್ಲಿ ಝಾಕೀರ್ ರಶೀದ್ ಭಟ್ ಕಾಶ್ಮೀರಿ ಜನರಿಗೆ ಆಜಾದಿಯ ಗುರಿ ಸಾಧಿಸುವ ತನಕವೂ ಈಗ ನಡೆಯುತ್ತಿರುವ ಆಂದೋಲನವನ್ನು ಮುಂದುವರಿಸಿಕೊಂಡು ಹೋಗುವಂತೆ ಕರೆ ನೀಡಿದ್ದಾನೆ. ಝಾಕೀರ್ ರಶೀದ್ ಭಟ್ ವಾನಿಯ ಉತ್ತರಾಧಿಕಾರಿ ಎಂದು ಹಿಜ್ಬುಲ್ ಮುಜಾಹೀದೀನ್ ಸಂಘಟನೆ ದೃಢಪಡಿಸಿಲ್ಲ ಆದರೆ ಎಂಟು ನಿಮಿಷಗಳ ಈ ವಿಡಿಯೋದಲ್ಲಿ ಭಟ್ ತಾನು ವಾನಿಯ ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾನೆ.

ಚಂಡೀಗಢದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದ 22ರ ಹರೆಯದ ಭಟ್ ಅದನ್ನು ಅರ್ಧಕ್ಕೆ ನಿಲ್ಲಿಸಿ 2013ರಲ್ಲಿ ಪುಲ್ವಾಮದಲ್ಲಿನ ನೂರ್ಪುರ ಗ್ರಾಮಕ್ಕೆ ಮರಳಿದ್ದ. ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿರುವ ಏಕೈಕ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಸೇರಿಕೊಂಡಿದ್ದ. ಇದೀಗ ಬಿಡುಗಡೆಗೊಂಡಿರುವ ವಿಡಿಯೋದಲ್ಲಿ ಭಟ್ ಮಿಲಿಟರಿ ವಸ್ತ್ರವನ್ನು ಧರಿಸಿಕೊಂಡು ಕುರ್ಚಿಯೊಂದರ ಮೇಲೆ ಕುಳಿತು ಮಾತನಾಡಿದ್ದಾನೆ. ಈ ವೇಳೆ ಆತನ ಹಿಂಭಾಗದಲ್ಲಿ ಮೂರು ಎಕೆ ರೈಫಲ್ ಗಳು ಇರುವುದು ಕಂಡು ಬಂದಿದೆ.

SCROLL FOR NEXT