ದೆಹಲಿ ಐಐಟಿಯಲ್ಲಿ ಜಾನ್ ಕೆರ್ರಿ ಭಾಷಣ 
ಪ್ರಧಾನ ಸುದ್ದಿ

ಭಾರತದ ಅಭಿವೃದ್ಧಿಗೆ ಅಧಿಕಾರಿಗಳಿಂದಲೇ ಅಡ್ಡಗಾಲು: ಜಾನ್ ಕೆರ್ರಿ

ಭಾರತೀಯ ಅಧಿಕಾರಿಗಳು ಅಭಿವೃದ್ಧಿ ತಡೆಯೊಡ್ಡುವಲ್ಲಿ ಪರಿಣಿತರು ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಹೇಳಿದ್ದಾರೆ.

ನವದೆಹಲಿ: ಭಾರತೀಯ ಅಧಿಕಾರಿಗಳು ಅಭಿವೃದ್ಧಿ ತಡೆಯೊಡ್ಡುವಲ್ಲಿ ಪರಿಣಿತರು ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಹೇಳಿದ್ದಾರೆ.

ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಬುಧವಾರ ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ  ವೇಳೆ ಭಾರತೀಯ ಅಧಿಕಾರಿಗಳನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಜಾನ್ ಕೆರ್ರಿ, ಭಾರತೀಯ ಅಧಿಕಾರಿಗಳನ್ನು ಯೋಜನೆಗಳಿಗೆ ತಡೆಯೊಡ್ಡುವ ಪರಿಣತರೆಂದು ವ್ಯಾಖ್ಯಾನಿಸುವ  ಮೂಲಕ ಭಾರತದ ಆಡಳಿತ ವ್ಯವಸ್ಥೆಯ ಅವ್ಯವಸ್ಥೆಯನ್ನು ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ.

ಅಧಿಕಾರಿಶಾಹಿಯಲ್ಲಿನ ಕಾರ್ಯಕ್ಷಮತೆ, ಅಧಿಕಾರಿಗಳ ದಕ್ಷತೆಯ ಕೊರತೆಯ ಬಗ್ಗೆ ನೇರ ವಾಗ್ದಾಳಿ ನಡೆಸಿದ ಕೆರ್ರಿ, ಭಾರತೀಯ ಅಧಿಕಾರಿಗಳು ಯೋಜನೆಗಳಿಗೆ ತಡೆಯೊಡ್ಡುವುದರಲ್ಲಿ ಪರಿಣತರು  ಎಂಬ ಅಪಖ್ಯಾತಿಯಿಂದ ಹೊರಬಂದರಷ್ಟೇ ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. " ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾದರೂ,  ಅದು ಎಷ್ಟು ವೇಗದಲ್ಲಿ ಸಾಗುತ್ತಿದೆ ಎಂಬ ಸಂಗತಿ ಮಹತ್ವದ್ದಾಗಿದೆ. ಹೊಸ ಬೃಹತ್ ಉದ್ಯಮಗಳು ಸ್ಥಾಪನೆಗೊಂಡು, ತ್ವರಿತವಾಗಿ ಅವು ಕಾರ್ಯಾರಂಭ ಮಾಡುವ ವಾತಾವರಣ  ಸೃಷ್ಟಿಯಾಗಬೇಕು. ಆದರೆ ಭಾರತದ ಕಠಿಣ ಕಾನೂನು ಹಾಗೂ ಅಧಿಕಾರಶಾಹಿಯ ನೀತಿಯಿಂದಾಗಿ ವಿದೇಶಿ ಹೂಡಿಕೆ ಹಾಗೂ ಉದ್ದಿಮೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು  ಅವರು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಮಳೆ ಹಾಗೂ ಟ್ರಾಫಿಕ್ ಜಾಮ್ ಕುರಿತು ವಿದ್ಯಾರ್ಥಿಗಳೊಂದಿಗೆ ಹಾಸ್ಯ ಚಟಾಕಿ ಹಾರಿಸಿದ ಕೆರ್ರಿ, ವಿದ್ಯಾರ್ಥಿಗಳನ್ನು ದೋಣಿಯಲ್ಲಿ ಬಂದಿರಾ ಎಂದು ಪ್ರಶ್ನಿಸಿದರು. ದೆಹಲಿಯಲ್ಲಿ  ಬುಧವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಜಾನ್ ಕೆರ್ರಿಗೂ ಇದರ ಬಿಸಿ ತಟ್ಟಿತು. ಹೀಗಾಗಿ ಐಐಟಿ ಸಮಾರಂಭಕ್ಕೆ 1 ಗಂಟೆ ತಡವಾಗಿ ಕೆರ್ರಿ  ಆಗಮಿಸಿದರು. ‘ನೀವು ದೋಣಿಯಲ್ಲಿ ಬಂದಿದ್ದೀರಾ? ಅಥವಾ ನೆಲ, ನೀರಿನಲ್ಲಿ ತೇಲುವ ವಾಹನದಲ್ಲಿ ಬಂದಿರಾ?’ ಎಂದು ಹಾಸ್ಯಚಟಾಕಿ ಹಾರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT