ಪ್ರಧಾನ ಸುದ್ದಿ

ಚೂಡಿದಾರ್ ಧರಿಸಿದ ಮಹಿಳೆಯರಿಗೆ ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ಇಲ್ಲ

Lingaraj Badiger
ಕೊಚ್ಚಿ: ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಚೂಡಿದಾರ್‌ ಧರಿಸಿ ಬರಲು ಅವಕಾಶ ನೀಡಿದ್ದ ಹೊಸ ವಸ್ತ್ರ ಸಂಹಿತೆಯನ್ನು ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ ಗುರುವಾರ ರದ್ದುಗೊಳಿಸಿದೆ.
ವಸ್ತ್ರ ಸಂಹಿತೆ ಸಡಿಲಗೊಳಿಸಿ ದೇವಾಲಯಕ್ಕೆ ಚೂಡಿದಾರ್ ಧರಿಸಿ ಬರಲು ಅವಕಾಶ ನೀಡಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಆದೇಶ ಪ್ರಶ್ನಿಸಿ ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆಡಳಿತ ಮಂಡಳಿಯ ಆದೇಶ ರದ್ದುಗೊಳಿಸಿದೆ.
ಹೊಸ ವಸ್ತ್ರ ಸಂಹಿತೆ ದೇವಸ್ಥಾನದ ಪುರಾತನ ಸಂಪ್ರದಾಯಕ್ಕೆ ಧಕ್ಕೆ ತರುತ್ತದೆ ಎಂದು ಖಾಸಿಗಿ ವ್ಯಕ್ತಿಗಳು ದೂರಿದ್ದರು.
ಮಹಿಳೆಯರು ಕಡ್ಡಾಯವಾಗಿ ಸೀರೆ ಹಾಗೂ ಪುರುಷರು ಧೋತಿ ಧರಿಸಬೇಕು ಎಂಬ ನಿಯಮವಿತ್ತು, ಆದರೆ ಇತ್ತೀಚಿಗೆ ಮಹಿಳೆಯರು ಚೂಡಿದಾರ್ ಧರಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ತಿರುವನಂತಪುರದ ರಿಯಾ ರಾಜಿ ಎಂಬುವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ವಸ್ತ್ರ ಸಂಹಿತೆ ನೀತಿ ಸಡಿಲಿಸಲಾಗಿದೆ ಎಂದು ದೇವಾಲಯ ಕಾರ್ಯಕಾರಿ ಅಧಿಕಾರಿ ಕೆ,ಎನ್ ಸತೀಶ್ ತಿಳಿಸಿದ್ದರು.
SCROLL FOR NEXT