ಎಚ್.ವೈ.ಮೇಟಿ 
ಪ್ರಧಾನ ಸುದ್ದಿ

ಸಚಿವ ಎಚ್.ವೈ.ಮೇಟಿ ರಾಸಲೀಲೆ ಸಿಡಿ ಬಿಡುಗಡೆ ಮಾಡದಂತೆ ಆರ್ ಟಿಐ ಕಾರ್ಯಕರ್ತನಿಗೆ ಬೆದರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಹೊಸ ಕಳಂಕ ಅಂಟಿಕೊಂಡಿದ್ದು, ಸಿದ್ದರಾಮಯ್ಯ ಅವರ ಅಪ್ತ ಸಚಿವರೊಬ್ಬರು...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಹೊಸ ಕಳಂಕ ಅಂಟಿಕೊಂಡಿದ್ದು, ಸಿದ್ದರಾಮಯ್ಯ ಅವರ ಅಪ್ತ ಸಚಿವರೊಬ್ಬರು ರಾಸಲೀಲೆ ನಡೆಸಿದ ಸಿಡಿ ಬಿಡುಗಡೆ ಮಾಡದಂತೆ ಆರ್‌ಟಿಐ ಕಾರ್ಯಕರ್ತರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಭಾನುವಾರ ಆರೋಪಿಸಲಾಗಿದೆ.
ಬಳ್ಳಾರಿ ಮೂಲದ ಆರ್‌ಟಿಐ ಕಾರ್ಯಕರ್ತ ರಾಜ್‌ಶೇಖರ್‌ ಎನ್ನುವವರ ಬಳಿ ಸಚಿವರ ರಾಸಲೀಲೆ ಸಿಡಿ ಇದ್ದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದಂತೆ ಸಚಿವರ ಬೆಂಬಲಿಗರು ಅವರಿಗೆ ಧಮ್ಕಿ ಹಾಕಿದ್ದಾರೆ. ಈ ಸಂಬಂಧ ರಾಜ್‌ಶೇಖರ್‌ ಅವರು ಪೊಲೀಸರು ದೂರು ನೀಡಲು ಮುಂದಾಗಿದ್ದಾರೆ.
ರಾಜಶೇಖರ್‌ಗೆ ಬೆದರಿಕೆ ಒಡ್ಡಿದ ವ್ಯಕ್ತಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರ ಹೆಸರು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಸಾರವಾದ ಆಡಿಯೋದಲ್ಲಿ ಕೇಳಿ ಬಂದಿದೆ. ಬೇಕಾದ್ರೆ ಹಣ ತೆಗೊಳ್ಳಿ ಸಿಡಿ ಬಿಡುಗಡೆ ಮಾಡಬೇಡಿ. ಮಾಡಿದ್ರೆ ನಿಮಗೆ ನಿಮ್ಮನೆಯವ್ರಿಗೆ ಚೆನ್ನಾಗಿರಲ್ಲ ಎಂದು ಬೆದರಿಕೆ ಒಡ್ಡಲಾಗಿದೆ.
ಸಹಾಯ ಯಾಚಿಸಿ ಬಂದ 24 ರ ಹರೆಯದ ಯುವತಿಯೊಂದಿಗೆ 70 ರ ಹರೆಯದಲ್ಲಿರುವ ಮೇಟಿ ಅವರು ಸೆಕ್ಸ್‌ ನಡೆಸಿದ್ದು ಇದನ್ನು ರಹಸ್ಯ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ. 
ಇನ್ನು ತಮ್ಮ ವಿರುದ್ಧದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಸಚಿವ ಎಚ್.ವೈ.ಮೇಟಿ ಅವರು, ಯಾವುದೇ ಸಿಡಿ ಬಗ್ಗೆ ಮತ್ತು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ಅವರಿಗೆ ಯಾರೂ ಧಮ್ಕಿ ಹಾಕಿದ್ದಾರೆ ಎಂಬುದುರ ಬಗ್ಗೆಯೂ ತಮಗೆ ಗೊತ್ತಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!