ಯೋಧ ಹನಮಂತಪ್ಪ ಕೊಪ್ಪದ ಮತ್ತು ಸೇನಾಸ್ಪತ್ರೆ 
ಪ್ರಧಾನ ಸುದ್ದಿ

ಸಿಯಾಚಿನ್ ನಲ್ಲಿ ಪತ್ತೆಯಾದ ಕರ್ನಾಟಕದ ಯೋಧನ ಸ್ಥಿತಿ ಗಂಭೀರ

ಸಿಯಾಚಿನ್ ನಲ್ಲಿ ಕಳೆದ ವಾರ ಉಂಟಾದ ಭೀಕರ ಹಿಮಪಾತದಿಂದಾಗಿ ನಾಪತ್ತೆಯಾಗಿ ಸತತ 6 ದಿನಗಳ ಬಳಿಕ ಪತ್ತೆಯಾಗಿದ್ದ ಕರ್ನಾಟಕದ ಯೋಧ ಲ್ಯಾನ್ಸ್ ನಾಯಕ ಹನಮಂತಪ್ಪ ಕೊಪ್ಪದ ಅವರ...

ನವದೆಹಲಿ: ಸಿಯಾಚಿನ್ ನಲ್ಲಿ ಕಳೆದ ವಾರ ಉಂಟಾದ ಭೀಕರ ಹಿಮಪಾತದಿಂದಾಗಿ ನಾಪತ್ತೆಯಾಗಿ ಸತತ 6 ದಿನಗಳ ಬಳಿಕ ಪತ್ತೆಯಾಗಿದ್ದ ಕರ್ನಾಟಕದ ಯೋಧ ಲ್ಯಾನ್ಸ್ ನಾಯಕ  ಹನಮಂತಪ್ಪ ಕೊಪ್ಪದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಹಿಮಪಾತದಲ್ಲಿ ತನ್ನ ಸಹೋದ್ಯೋಗಿ 9 ಸೈನಿಕರೊಂದಿಗೆ ನಾಪತ್ತೆಯಾಗಿದ್ದ ಹನಮಂತಪ್ಪ ನಾಯಕ ಸತತ 6 ದಿನಗಳ ಮಂಜಿನಡಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡಿದ್ದರು.  ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹನಮಂತಪ್ಪ ಕೊಪ್ಪದ ಅವರನ್ನು ರಕ್ಷಿಸಲಾಗಿತ್ತು. ಬಳಿಕ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೌಲಾ ಕಾನ್  ನಲ್ಲಿರುವ ಸೇನಾ ಸಂಶೋಧನಾ ಆಸ್ಪತ್ರೆಯಲ್ಲಿ ಹನಮಂತಪ್ಪ ಕೊಪ್ಪದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದೆ  ಎಂದು ತಿಳಿದುಬಂದಿದೆ. ಹೀಗಾಗಿ ಅವರನ್ನು ತುರ್ತ ನಿಗಾ ಘಟಕದಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಗಾಯಗೊಂಡ ಯೋಧ ಹನಮಂತಪ್ಪ ಕೊಪ್ಪದ ಅವರ ಆರೋಗ್ಯ ವಿಚಾರಣೆಗಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದು, ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಇದೇ ವೇಳೆ  ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಕೂಡ ಆಗಮಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿ 3ರಂದು ಸಿಯಾಚಿನ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಿಂದಾಗಿ ಅಲ್ಲಿ ಪಹರೆ ನಡೆಸುತ್ತಿದ್ದ ಮದ್ರಾಸ್ ರೆಜಿಮೆಂಟ್ ನ ಸುಮಾರು 10 ಯೋಧರು ಹಿಮದಲ್ಲಿ ಜೀವಂತ  ಸಮಾಧಿಯಾಗಿದ್ದರು. ಈ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕದ ಮೂಲದ ಲ್ಯಾನ್ಸ್ ನಾಯಕ್ ಹನಮಂತಪ್ಪ ಕೊಪ್ಪದ ಅವರು ಪವಾಡಸದೃಶವಾಗಿ ಬದುಕುಳಿದಿದ್ದರು.  ಸುಮಾರು 25 ಅಡಿಗಳ ಕೆಳಗೆ ಸಿಲುಕಿದ್ದ ಹನಮಂತಪ್ಪ ಕೊಪ್ಪದ ಅವರು ಸುಮಾರು ಮೈನಸ್ 40 ಡಿಗ್ರಿ ಉಷ್ಣಾಂಶದಲ್ಲಿ ಸತತ 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರು.

ಪ್ರಸ್ತುತ ಘಟನೆ ನಡೆದ ಸಿಯಾಚಿನ್ ನಲ್ಲಿ ಮೃತ ದೇಹಗಳ ಶೋಧ ಕಾರ್ಯ ಮುಂದುವರೆದಿದೆ ಸೇನಾ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿಗೆ ಮೊದಲು 'Tr' ಬಳಸುವ ಅವಕಾಶ!