ಖಟ್ಮಂಡುವಿನಲ್ಲಿ ಮಂಗಳವಾರ ಕೊನೆಯುಸಿರೆಳೆದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ 
ಪ್ರಧಾನ ಸುದ್ದಿ

ಕೊಯಿರಾಲ ಅಂತ್ಯಸಂಸ್ಕಾರಕ್ಕೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗ

ಖಟ್ಮಂಡುವಿನಲ್ಲಿ ಮಂಗಳವಾರ ಕೊನೆಯುಸಿರೆಳೆದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ, ವಿದೇಶಾಂಗ

ನವದೆಹಲಿ: ಖಟ್ಮಂಡುವಿನಲ್ಲಿ ಮಂಗಳವಾರ ಕೊನೆಯುಸಿರೆಳೆದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಹೋಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಈ ನಷ್ಟದ-ನೋವಿನ ಸಮಯದಲ್ಲಿ ನೇಪಾಳದ ಜೊತೆಗಿದ್ದೇವೆ. ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಹೋಗಲಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಸ್ವರಾಜ್ ಮುಂದಾಳತ್ವದ ನಿಯೋಗ ನೇಪಾಳದ ಖಟ್ಮಂಡುವಿನಲ್ಲಿ ಸಂಜೆ ೫ ಕ್ಕೆ ಇಳಿದು ನಂತರ ತಡರಾತ್ರಿಯಲ್ಲಿ ನವದೆಹಲಿಗೆ ಹಿಂದಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್, ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಹಾಗೂ ಓಲಿಯವರ ವಿದೇಶಾಂಗ ಸಂಬಂಧಗಳ ಸಲಹಾಧಿಕಾರಿ ಗೋಪಾಲ್ ಖನಲ್ ಅವರನ್ನು ಭೇಟಿಯಾಗಲಿದ್ದಾರೆ.

ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಮತ್ತು ಸಿಪಿಐ(ಮಾರ್ಕ್ಸಿಸ್ಟ್) ಮುಖಂಡ ಸೀತಾರಾಮ್ ಯೆಚೂರಿ, ಸುಷ್ಮಾ ಸ್ವರಾಜ್ ಅವರ ಜೊತೆ ಅಂತ್ಯಸಂಕಾರಕ್ಕೆ ತೆರಳಲಿದ್ದಾರೆ.

ಬಾಗ್ಮತಿ ನದಿಯ ತಟದಲ್ಲಿರುವ ಪಾಶುಪತಿನಾಥ ದೇವಾಲಯದಲ್ಲಿ ಕೊಯಿರಾಲ ಅವರ ಕೊನೆಯ ವಿಧಿಗಳು ಜರುಗಲಿವೆ. ನೇಪಾಳ ಸರ್ಕಾರ ಬುಧವಾರ ಸಾರ್ವಜನಿಕ ರಜೆ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!