ಪಂಚಾಯಿತಿ ಚುನಾವಣೆ: ಕಡ್ಡಾಯದ ನಡುವೆಯೂ ಶೇ.73 ಮತದಾನ
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ 15 ಜಿಲ್ಲೆಗಳಲ್ಲಿ ಶನಿವಾರ ಮುಕ್ತಾಯವಾಗಿದ್ದು, ಕಡ್ಡಾಯ ಮತದಾನದ ನಡುವೆಯೂ ಸರಾಸರಿ ಶೇ.73 ರಷ್ಟು ಮತದಾನವಾಗಿದೆ.
ನಿನ್ನೆ ನಡೆದ ಚುನಾವಣೆಯು ಮಧ್ಯಾಹ್ನದವರೆಗೂ ಮಂದಗತಿಯಲ್ಲಿ ಸಾಗಿತ್ತು. ನಂತರ ಸಂಜೆ ಬಳಿಕ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿತ್ತು. ನಾವ್ರು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈ ಕೊಟ್ಟು ಮತದಾನ ಆರಂಭವಾಗುವುದು ವಿಳಂಬವಾಗಿತ್ತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಲವೆಡೆ ಮತದಾರರು ಹಕ್ಕು ಚಲಾಯಿಸದೆ ಬಹಿಷ್ಕಾರ ಹಾಕಿದರು. ಇನ್ನುಳಿದಂತೆ ಮತದಾನ ಶಾಂತಿಯುತವಾಗಿ ನಡೆಯಿತು.
ಕಳೆದ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಡ್ಡಾಯ ಮತದಾನ ಜಾರಿ ಮಾಡಲಾಗಿತ್ತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಡ್ಡಾಯ ಮತದಾನ ಜಾರಿಯಿದ್ದರಿಂದ ಶೇ.82 ರಷ್ಟು ಮತದಾನವಾಗಿತ್ತು. 15 ಜಿಲ್ಲೆಗಳ 550 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಅಂತಿಮವಾಗಿ 2,087 ಅಭ್ಯರ್ಥಿಗಲು ಉಳಿದುಕೊಂಡಿದ್ದರು. ತಾಲೂಕು ಪಂಚಾಯಿತಿಯ 1945 ಕ್ಷೇತ್ರಗಳಿಗೆ 6,288 ಉಮೇದುವಾರರು ಸ್ಪರ್ಥೆಯಲ್ಲಿದ್ದರು. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ 2 ಜಿಪಂ ಕ್ಷೇತ್ರಗಳಲ್ಲಿ ಹಾಗೂ ಬೆಳಗಾವಿಯ 10 ಹಾಗೂ ರಾಮನಗರದ 1 ತಾಪಂ ಕ್ಷೇತ್ರಗಳಲ್ಲಿ ಅವರೋಧ ಆಯ್ಕೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಪಂಚಾಯಿತಿಯ 2-ಹಲಗೇರಿ ಕ್ಷೇತ್ರದ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಿದ್ದ ಮತಪತ್ರ ಬದಲಾವಣೆಯಾಗಿದ್ದ ಕಾರಣ ಈ ಮತಗಟ್ಟೆಯಲ್ಲಿ ಫೆ.15 ರಂದು ಮರುಮತದಾನ ನಡೆಯಲಿದೆ.
ಇನ್ನುಳಿದಂತೆ 3 ಕ್ಷೇತ್ರಘಳ ಶಾಸಕರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಈ ಪೈಕಿ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಇನ್ನುಳಿದ ಕ್ಷೇತ್ರಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಇಳಿದಿದ್ದವು. ಜೆಡಿಎಸ್ ಪಕ್ಷ ಕೂಡ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿತ್ತು. ಹೀಗಾಗಿ ಫಲಿತಾಂಶ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಫೆ.16ರಂದು ಹೊರಬೀಳಲಿದೆ ಫಲಿತಾಂಶ
ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ಫೆ.16ರ ಮಂಗಳವಾರ ಹೊರಬೀಳಲಿದೆ.
ಫೆ.16 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ. ಬಳಿಕ ಎಲೆಕ್ಟ್ರಾನಿಕ್ ಮತಯಂತ್ರಗಳ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದೊಳಗೆ ಫಲತಾಂಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.