ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಬಹು ಉದ್ದೇಶಿತ ನೂತನ ಬೆಳೆವಿಮಾ ಯೋಜನೆ ‘ವಿಮಾ ಫಸಲ್’ ಕುರಿತಂತೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು...

ಬೆಳಗಾವಿ: ಬಹು ಉದ್ದೇಶಿತ ನೂತನ ಬೆಳೆವಿಮಾ ಯೋಜನೆ ‘ವಿಮಾ ಫಸಲ್’ ಕುರಿತಂತೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ರೈತ ಜಾಗೃತಿ ಸಮಾವೇಶದಲ್ಲಿ  ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗಾವಿಗೆ ಆಗಮಿಸಿದರು.

ಶನಿವಾರ ಮಧ್ಯಾಹ್ನ ಸುಮಾರು 4.30ರ ಹೊತ್ತಿಗೆ ಬೆಳಗಾವಿಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ತೀವ್ರ ಭದ್ರತೆಯ ನಡುವೆ ವೇದಿಕೆಗೆ ಕರೆತರಲಾಯಿತು.  ಈ ವೇಳೆ ಹಲವು ರೈತ ಸಂಘಟನೆಗಳು ಪ್ರಧಾನಿ ಅವರಿಗೆ ಪ್ರತಿಭಟನೆಯ ಮೂಲಕ ಸ್ವಾಗತ ಕೋರಿದವು. ‘ಕಳಸಾ ಬಂಡೂರಿ’ ಹೋರಾಟಕ್ಕೆ ಪ್ರಧಾನಿಯವರಿಂದ  ನ್ಯಾಯ ಸಿಗಬೇಕು, ಕಳಸಾ – ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ತಮ್ಮ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದ ನೂರಾರು ರೈತರು ತೀವ್ರ ಪ್ರತಿಭಟನೆ  ನಡೆಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಪ್ರಧಾನ ವೇದಿಕೆಯತ್ತ ಆಗಮಿಸುತ್ತಿದ್ದಂತೆಯೇ ಬರುತ್ತಿದ್ದಂತೆಯೇ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ರೈತರು ಹಸಿರು ಶಾಲು  ಮತ್ತು ಕಪ್ಪುಧ್ವಜ ಹಿಡಿದುಕೊಂಡು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ಒಬ್ಬೊಬ್ಬರನ್ನಾಗಿ ವಶಕ್ಕೆ ತೆಗೆದುಕೊಂಡು ಎಪಿಎಂಸಿ  ಮಾರುಕಟ್ಟೆಯತ್ತ ಸಾಗಿಸಿದರು. ಇದೇ ವೇಳೆಗೆ ಕಳಸಾಬಂಡೂರಿ ನ್ಯಾಯಕ್ಕಾಗಿ ನೂರಾರು ರೈತರು ಧಾರವಾಡದಲ್ಲೂ ಪ್ರತಿಭಟನೆ ನಡೆಸುತ್ತಿದ್ದು ಟೈರುಗಳಿಗೆ ಬೆಂಕಿ  ಹಚ್ಚಿ ಪ್ರತಿಭಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

SCROLL FOR NEXT